ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂ.ಕೆ.ಅನಂತ್ರಾಜ್ ಆಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಆಶ್ರಯದಲ್ಲಿ ಮೂಡುಬಿದಿರೆಯ ಸ್ಕೌಟ್ಸ್ & ಗೈಡ್ಸ್ ( ಕನ್ನಡ ಭವನ) ನಲ್ಲಿ ನಡೆದ 22 ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ನೀರ್ಮಾರ್ಗದ ರೆಡ್ ಕ್ಯಾಮೆಲ್ ಆಂಗ್ಲ ಮಾಧ್ಯಮ ಶಾಲೆ ಓವರ್ ಆಲ್ ಚಾಂಪಿಯನ್ ಅಗಿ ಪ್ರಶಸ್ತಿ ಪಡೆದುಕೊಂಡಿದೆ.
ರನ್ನರ್ಸ್ ಚಾಂಪಿಯನ್ ಆಗಿ ಮಂಗಳೂರಿನ ಯೇನಪೋಯ ಶಾಲೆ ಹಾಗೂ ತೃತೀಯ ಸ್ಥಾನವನ್ನು ಅಡ್ಯಾರಿನ ಬರಾಕ ಇಂಟರ್ನ್ಯಾಷನಲ್ ಶಾಲೆ ಪಡೆದುಕೊಂಡಿದೆ.
ಮಾಜಿ ಸಚಿವ ಕ.ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡ ಸುದರ್ಶನ ಎಂ, ಎಂ.ಕೆ.ಅನಂತ್ರಾಜ್ ಆಫ್ ಫಿಸಿಕಲ್ ಎಜುಕೇಶನ್ ನ ಪ್ರಾಂಶುಪಾಲರಾದ ಧನಂಜಯ ಶೆಟ್ಟಿ, ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅಬುಲ್ ಅಲಾ,ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಾಹುಲ್ ಟಿ.ಜಿ,ಉಪಾಧ್ಯಕ್ಷ ಅರುಣ್ ಕುಮಾರ್ ನಿಟ್ಟೆ,ಅಂತರಾಷ್ಟ್ರೀಯ ತರಬೇತುದಾರ ಸ್ವಾಮಿ ಪ್ರಸಾದ್,ರಾಜ್ಯ ಕರಾಟೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಬೆಳ್ಮಣ್,ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್, ಹಿರಿಯ ಕರಾಟೆ ಶಿಕ್ಷಕ ಸುರೇಶ್ ಕುಮಾರ್ ಶೆಟ್ಟಿ, ಕರಾಟೆ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಿದರು.
ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಮುಹಮ್ಮದ್ ನದೀಮ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅಂಚನ್ ಈ ಪಂದ್ಯದ ತೀರ್ಪುಗಾರರಾಗಿದ್ದರು.
ಶಿಕ್ಷಕ ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


