ಜ್ವರ ಎಂದು ಆಸ್ಪತ್ರೆಗೆ ದಾಖಲಾದ ಯುವಕ ಮತ್ತೆ ವಾಪಾಸು ಬರಲಿಲ್ಲ. ಇದು ನಿನ್ನೆ ರಾತ್ರಿ ನಡೆದ ಘಟನೆ.
ದುರ್ಗಾಪ್ರಸಾದ್. 35 ರ ಆಸುಪಾಸಿನ ಈ ಅವಿವಾಹಿತ ಯುವಕ ಹೌದಾಲು, ಪಡುಕೊಣಾಜೆ ಪರಿಸರದಲ್ಲಿ ಚಿರಪರಿಚಿತ. ನಿವೃತ್ತ ಶಿಕ್ಷಕ ದಿ.ಶ್ಯಾಮ್ ಮಾಷ್ಟ್ರ ಮಗ. ಟಿವಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕಲೆ, ಸಂಘಟನೆ ಎಂದು ಸಕ್ರಿಯರಾಗಿದ್ದು ಇಲ್ಲಿನ ಯುವಕ ಮಂಡಲ,ಗಣೇಶೋತ್ಸವ ಸಮಿತಿಯಲ್ಲಿ ಸದಸ್ಯರಾಗಿದ್ದರು.
ಜ್ವರ ಎಂದು ಮೂಡುಬಿದಿರೆ ಅಲಂಗಾರಿನ ಆಸ್ಪತ್ರೆಗೆ ನಿನ್ನೆ ಸಂಜೆ ದಾಖಲಾಗಿದ್ದರು.ಆದರೆ ದಾಖಲಾದ ಅರ್ಧಗಂಟೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.ಅದು ಯಾವ ಜ್ವರ ? ಈ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಮೃತ ದುರ್ಗಾಪ್ರಸಾದ್ ತಾಯಿ,ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.






