ಸದ್ದು.ಒಂದು ಕಾಲದಲ್ಲಿ ಬೆದ್ರ ಕಾಂಗ್ರೆಸ್ ನ ಮುಂಚೂಣಿಯ ಕಾರ್ಯಕರ್ತ. ಎಲ್ಲದಕ್ಕೂ ಸಿದ್ದರಿದ್ದ ಸದ್ದು ಜೈನ್ ಪೇಟೆ ಸದ್ದು ಎಂದೇ ಖ್ಯಾತರಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ,ಮಾಜಿ ಸಚಿವ ಅಭಯಚಂದ್ರರವರ ಚುನಾವಣಾ ಸಂದರ್ಭಗಳಲ್ಲಿ ಕಾಂಗ್ರೆಸ್ ನ ಕಾರ್ಯಕರ್ತನಾಗಿ ಗೆಲುವಿಗಾಗಿ ಶ್ರಮಿಸಿದವರು.
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿಯೇ ದುಡಿದಿದ್ದ ಈ ಕಾರ್ಯಕರ್ತ ಯಾವುದೇ ನಾಯಕನಾಗಲೇ ಇಲ್ಲ.
ಸದ್ದು ಎಂದೇ ಮೂಡುಬಿದಿರೆ ಪರಿಸರದಲ್ಲಿ ಪರಿಚಿತರಾಗಿದ್ದ ಸದಾಶಿವ ದೇವಾಡಿಗ ( 58) ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.
ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.













