ಪೆರಿಂಜೆ ಮದರಸದಲ್ಲಿ ಇಶಲ್ ಮದೀನ ಕಾರ್ಯಕ್ರಮ

Picture of Namma Bedra

Namma Bedra

Bureau Report

ಪೆರಿಂಜೆಯ ಮುನವ್ವರುಲ್ ಇಸ್ಲಾಮಿಕ್ ಮದರಸದಲ್ಲಿ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ‘ಇಶಲ್ ಮದೀನ’ ಕಾರ್ಯಕ್ರಮವು ಮದರಸ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಂಧಿನಗರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮದರಸದ ಧರ್ಮಗುರುಗಳಾದ ಅಶ್ರಫ್ ಅಲ್ ಅಝಹರಿ ಸುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಡ್ಡಂದಡ್ಕ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಖಾಮಿಲ್ ಮನ್ನಾನಿ ಕರಾಯ ಅವರು ಮಿಲಾದ್ ಸಂದೇಶ ನೀಡಿದರು.
ಪಡ್ಡಂದಡ್ಕ ಮಸೀದಿ ಕಮಿಟಿಯ ಅಧ್ಯಕ್ಷ ಕೆ.ಇಸ್ಮಾಯಿಲ್ ಪೆರಿಂಜೆ,ಪತ್ರಕರ್ತ ಹೆಚ್.ಮುಹಮ್ಮದ್ ವೇಣೂರು,ಮದರಸ ಸಮಿತಿಯ ಗೌರವಾಧ್ಯಕ್ಷ ಯಾಕೂಬ್ ಪೆರಿಂಜೆ,ಮುಹಮ್ಮದ್ ಶಾಫಿ ಕಿರೋಡಿ,ನಝೀರ್ ಪೆರಿಂಜೆ,ಪಿ.ವಿ.ಅಬ್ದುಲ್ ರಹ್ಮಾನ್ ಪೆರಿಂಜೆ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು.
‌ ಪಡ್ಡಂದಡ್ಕ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಫೀಕ್,ಶಾಂತಿನಗರ ಮದರಸ ಸಮಿತಿಯ ಅಧ್ಯಕ್ಷ ಪಿ.ಹೆಚ್.ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತೌಫೀಕ್ ಸ್ವಾಗತಿಸಿ ಮಿಶಾಲ್ ವಂದಿಸಿದರು. ಹಾಫಿಲ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top