ಪಡ್ಡಂದಡ್ಕದ ನೂರುಲ್ ಹುದಾ ಜುಮ್ಮಾ ಮಸೀದಿಯಲ್ಲಿ ನಿರ್ಮಿಸಲಾದ ವಿವಿಧ ಮೂಲಭೂತ ಸೌಕರ್ಯಗಳ ಉದ್ಘಾಟನೆಯು ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನವೀಕೃತ ಹೌಲ್ ( ವಝೂ ಖಾನ)ನ್ನು ತ್ವಯಿಬಾ ಎಜುಕೇಷನಲ್ ಸೆಂಟರ್ ನ ಅಧ್ಯಕ್ಷರಾಗಿರುವ ಸಯ್ಯದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಬಾಲರವಿ ಅವರು ಉದ್ಘಾಟಿಸಿದರು.
ನವೀಕೃತ ಮದರಸವನ್ನು ಬೆಳ್ತಂಗಡಿ ದಾರುಸ್ಸಲಾಮ್ ದಾವಾ ಕಾಲೇಜಿನ ಪ್ರಾಂಶುಪಾಲರಾದ ತ್ವಾಹಾ ತಂಙಳ್ ಉದ್ಘಾಟಿಸಿದರು. ಮುಂಬೈಯ (ಎಂಪೈರ್ ವಿಸ್ತ ಇನ್ಫ್ರಾ) ಉದ್ಯಮಿ ಮುಹಮ್ಮದ್ ಮುಸ್ತಫಾ ಅವರು ಮಸೀದಿ ಕಚೇರಿಯನ್ನು ಉದ್ಘಾಟಿಸಿದರು.

ಮಸೀದಿ ಖತೀಬರಾದ ಕಲಂದರ್ ಶಾಫಿ ಬಾಖವಿ ಖಾಮಿಲ್ ಅಲ್ ಮನ್ನಾನಿ, ಕರಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.
ಉದ್ಯಮಿ, ಡಿ.ಡಿ.ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಝಾಕ್ ಕನ್ನಡಿಕಟ್ಟೆ,ಮಸೀದಿ ಕಮಿಟಿ ಮಾಜಿ ಅಧ್ಯಕ್ಷ ಯು.ಕೆ.ಮುಹಮ್ಮದ್ ಹಾಜಿ,ಮೂಡುಬಿದಿರೆ ಅಲ್ ಮಫಾಝ್ ಕಾಲೇಜಿನ ಪ್ರಾಂಶುಪಾಲರಾದ ಪಿ.ಪಿ.ಅಹ್ಮದ್ ಸಖಾಫಿ,ಬೆಳ್ತಂಗಡಿ ಕೇಂದ್ರ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಪತ್ರಕರ್ತ ಹೆಚ್.ಮುಹಮ್ಮದ್ ವೇಣೂರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಮಸೀದಿ ಕಮಿಟಿ ಉಪಾಧ್ಯಕ್ಷ ಅಬ್ದುಲ್ ರಹಮಾನ್ ಕಟ್ಟೆ, ಕೋಶಾಧಿಕಾರಿ ಪಿ.ಜೆ.ಮಹಮೂದ್,ಲೆಕ್ಕ ಪರಿಶೋಧಕ ಇದ್ರೀಸ್ ಪೂಲಾಬೆ,ಜೊತೆ ಕಾರ್ಯದರ್ಶಿ ಅಬ್ದುಸ್ಸಲಾಮ್ ಕೇಶವನಗರ,ಸದಸ್ಯರಾದ ಅಶ್ರಫ್ ಕಿರೋಡಿ,ಯು.ಕೆ.ಇರ್ಫಾನ್ ಪೆರಿಂಜೆ, ಶಾಂತಿನಗರ ಮದರಸ ಸಮಿತಿ ಅಧ್ಯಕ್ಷ ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾರಾ ಇಬ್ರಾಹಿಂ ಟ್ರಸ್ಟ್ ನ ಪರವಾಗಿ ಅಕ್ಬರ್ ಪೆರಿಂಜೆ, ಯು.ಕೆ.ಮುಹಮ್ಮದ್ ಹಾಜಿ ಹಾಗೂ ಮುಹಮ್ಮದ್ ಮುಸ್ತಫಾ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಮುಹಮ್ಮದ್ ಶಾಫಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ ವಂದಿಸಿದರು.













