ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ. *ದ್ರಾವಿಡ್ ಪುತ್ರನೊಂದಿಗೆ ಈಸಾ ಪುತ್ತಿಗೆ ಮಿಂಚಿಂಗ್ !

Picture of Namma Bedra

Namma Bedra

Bureau Report

ಈಸಾ ಪುತ್ತಿಗೆ. ಈತ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ.ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ , ‘ಗೋಡೆ’ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅವರೊಂದಿಗೆ ಆಡುತ್ತಾ ಬೆಳೆಯುತ್ತಿರುವ ಈ ಪ್ರತಿಭೆ ಮೂಡುಬಿದಿರೆಯ ಪುತ್ತಿಗೆಯವರು ಎನ್ನಲು ಹೆಮ್ಮೆಯಾಗುತ್ತಿದೆ.
ಇತ್ತೀಚೆಗೆ ಅಂಡರ್- 19 ವಯೋಮಿತಿಯವರಿಗಾಗಿ ನಡೆದ ಕೆ.ಎಸ್.ಸಿ.ಎ. ಅಂತರ್ ವಲಯ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಚೂರು ತಂಡವು ಕೇವಲ 134 ರನ್ ಗಳಿಗೆ ಆಲೌಟಾಗಿತ್ತು.ಕಂಬೈನ್ಡ್ ಸಿಟಿ ತಂಡದ ಪರ ಆಡಿದ್ದ ಈಸಾ ಪುತ್ತಿಗೆ ಅವರ ಬೌಲಿಂಗ್ ದಾಳಿಗೆ ರಾಯಚೂರು ತಂಡವು ತತ್ತರಿಸಿತ್ತು. ಒಟ್ಟು ಈ ಪಂದ್ಯದಲ್ಲಿ 9 ವಿಕೆಟ್ ಗಳನ್ನು ಈಸಾ ಪುತ್ತಿಗೆ ಅವರು ಪಡೆದಿರುವುದರಿಂದ ಕಂಬೈನ್ಡ್ ಸಿಟಿ ತಂಡವು ಇನ್ನಿಂಗ್ಸ್ ಹಾಗೂ 211 ರನ್ ಗಳ ಅಂತರದಿಂದ ಜಯಗಳಿಸಲು ಸಾಧ್ಯವಾಗಿತ್ತು.
ಬೌಲಿಂಗ್ ನಲ್ಲಿ ಈಸಾ ಪುತ್ತಿಗೆ ಅವರು ಮಿಂಚಿದ್ದರೆ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ 159 ರನ್ ಮಾಡುವ ಮೂಲಕ ಬ್ಯಾಟಿಂಗ್ ನಲ್ಲಿ ಮಿಂಚಿದ್ದರು.ಆರಂಭಿಕ ಅಥರ್ವ ಮಾಳವೀಯ ಅವರು 115 ರನ್ ಗಳಿಸಿದ್ದರು.
ಅಂದಹಾಗೆ ಬೌಲಿಂಗ್ ನಲ್ಲಿ ಮಿಂಚುತ್ತಿರುವ ಈಸಾ ಪುತ್ತಿಗೆ ಅವರು ಪೊಲೀಸ್ ಅಧಿಕಾರಿ, ಪುತ್ತಿಗೆ ನಿವಾಸಿ ಅಬ್ದುಲ್ ಅಹದ್ ಅವರ ಪುತ್ರ.
ಕ್ರಿಕೆಟ್ ನಲ್ಲಿ ಈತ ಇನ್ನಷ್ಟು ಸಾಧನೆ ಮಾಡಲಿ,ಐಪಿಎಲ್ ಸಹಿತ ಭಾರತೀಯ ತಂಡದಲ್ಲೂ ಅವಕಾಶ ಸಿಗಲಿ ಎಂಬ ಹಾರೈಕೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top