ಜೇಸೀ ವೀಕ್ ಸಮಾರೋಪ *ಪತ್ರಕರ್ತ ನವೀನ್ ಸಾಲ್ಯಾನ್ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಮೂಡುಬಿದಿರೆ ಜೇಸಿಐ ನ ಜೇಸೀ ವೀಕ್ ಸಮಾರೋಪ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಪತ್ರಕರ್ತ ನವೀನ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಸೋಮವಾರ ಸಂಜೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಜೆಸಿಐ ಅಧ್ಯಕ್ಷೆ ವರ್ಷಾ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರೈಟ್ ಹರಿಜೋನ್ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಶರತ್ ಗೋರೆ,ಜೆಸಿಐ ಝೋನ್ 14 ರ ರೀಜನ್ ಇ ಯ ವಲಯ ಉಪಾಧ್ಯಕ್ಷ ಸುಹಾಸ್ ಎಪಿಎಸ್ ಮರಿಕೆ,ಜೇಸಿಐ ಹಿರಿಯ ಸದಸ್ಯ ಅನಂತವೀರ್ ಜೈನ್,ಮಾಜಿ ಅಧ್ಯಕ್ಷರಾದ ಅಬುಲ್ ಅಲಾ ಪುತ್ತಿಗೆ, ಮುಹಮ್ಮದ್ ಆರಿಫ್,ಮಹೇಂದ್ರ ವರ್ಮ,ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸದಸ್ಯ ವರುಣ್ ಕುಮಾರ್ ಅವರಿಗೆ ಕಮಲಪತ್ರ ಪುರಸ್ಕಾರ, ಅಂಬುಲೆನ್ಸ್ ಸೇವೆಗಾಗಿ ಪ್ರಶಾಂತ್ ಶೆಟ್ಟಿ ಮಾರ್ನಾಡ್ ಹಾಗೂ ಜೆಸಿಐ ವಲಯ ಉಪಾಧ್ಯಕ್ಷ ಸುಹಾಸ್ ಎಪಿಎಸ್ ಅವರನ್ನು ಸನ್ಮಾನಿಸಲಾಯಿತು.
ಲೇಡಿ ಜೆಸಿಐ ಅಧ್ಯಕ್ಷೆ ಸಹನಾ,ಜೆಜೆಸಿ ಅಧ್ಯಕ್ಷ ಮುಹಮ್ಮದ್ ಅವೈಸ್,ಜೆಸಿಐ ತ್ರಿಭುವನ್ ಕಾರ್ಯದರ್ಶಿ ಶ್ರವಣ್ ಕುಮಾರ್, ಜೇಸೀ ವೀಕ್ ಚೇರ್ ಮೆನ್ ಸುಧಾಕರ ಶೆಟ್ಟಿ, ವೀಣಾ ಸಂತೋಷ್,ಶಾಂತಲಾ ಎಸ್.ಆಚಾರ್ಯ,ಸುಪ್ರಿಯಾ ಭರತ್,ಮಮತಾ ಸಚ್ಚಿದಾನಂದ್,ಪ್ರಸನ್ನ ಕುಮಾರಿ, ಸನಿಹ ಪೈ,ಉಮೇಶ್ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ‌.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top