ಕೊಣಾಜೆಕಲ್ಲು: ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಹೃದಯಾಘಾತಕ್ಕೆ ಬಲಿ

Picture of Namma Bedra

Namma Bedra

Bureau Report

ಟ್ರಕ್ಕಿಂಗ್ ಗೆಂದು ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಯುವಕ ಪುತ್ತೂರು ಮೂಲದವನೆಂದು ಹೇಳಲಾಗುತ್ತಿದೆ.
ಪಡುಕೊಣಾಜೆ ಗ್ರಾಮದ ಕೊಣಾಜೆಕಲ್ಲಿಗೆ ಯುವಕರ ತಂಡವೊಂದು ಇಂದು ಬೆಳಿಗ್ಗೆ ಬಂದಿದ್ದು ಈ ಪೈಕಿ ಯುವಕನೋರ್ವ ಕೊಣಾಜೆಕಲ್ಲಿನ ತುದಿಗೇರಿದ್ದಾನೆ.ಅಲ್ಲೇ ಆತನಿಗೆ ಎದೆನೋವು ಕಾಣಿಸಿದೆ‌. ಹೃದಯಾಘಾತ ಸಂಭವಿಸಿ ಕುಳಿತಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ‌

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top