ಮೂಡುಬಿದಿರೆಯ ಸಮಾಜ ಮಂದಿರ ಸಭಾದ ಆಶ್ರಯದಲ್ಲಿ ನಡೆಯುತ್ತಿರುವ 78 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹೊಟೇಲ್ ಉದ್ಯಮಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಸಹಿತ ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹರ್ಷವರ್ಧನ ಪಡಿವಾಳ್( ಆಹಾರ ಉದ್ಯಮ), ವೇ.ಮೂ.ಎಂ.ಹರೀಶ್ ಭಟ್ ( ಧಾರ್ಮಿಕ), ಆಡ್ಲಿನ್ ಜೆ.ಜತ್ತನ್ನ ( ಶಿಕ್ಷಣ), ಗೌರಾ ಗೋವರ್ಧನ್ ( ಶಿಕ್ಷಣ, ಸಾಹಿತ್ಯ) ,ರವಿ ಕೋಟ್ಯಾನ್ ( ಛಾಯಾಗ್ರಹಣ) ಹಾಗೂ ಯಶವಂತ ಎಂ.ಜಿ ( ಸಂಗೀತ) ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿ.ವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ‘ ಭಾಷೆ ಮತ್ತು ಸಂಸ್ಕೃತಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ದಸರಾ ಉತ್ಸವದ ಸಂಚಾಲಕ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಸುರೇಶ್ ಪ್ರಭು, ಕೆ.ಆರ್.ಪಂಡಿತ್, ಸಿ.ಎಚ್.ಗಫೂರ್, ಪುಂಡಿಕಾಯ್ ಗಣಪಯ್ಯ ಭಟ್, ರಾಜೇಶ್ ಕೋಟೆಗಾರ್ ಮತ್ತಿತರರು ಉಪಸ್ಥಿತರಿದ್ದರು.






