ಹಾಗೆನ್ನುವ ಗುಸುಗುಸು ಸುದ್ಧಿಯೊಂದು ಕಳೆದ ಕೆಲವು ಸಮಯಗಳಿಂದ ಹರಿದಾಡುತ್ತಿದೆ. ಅಯ್ಕ್ ತಕ್ಕ ‘ಪಂಚಶಕ್ತಿ’ ಕ್ಷೇತ್ರದಾದ್ಯಂತ ಶಕ್ತಿ ಮೀರಿ ಓಡಾಡುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.
ಒಂದುವೇಳೆ ಮುಂದಿನ ಎಲೆಕ್ಷನ್ ನಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಪರ್ಧಿಸದಿದ್ದಲ್ಲಿ ರಂಜಿತ್ ಪೂಜಾರಿ ಅವರೇ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಕೋಟ್ಯಾನ್ ಅವರ ಎಲ್ಲ ಚುನಾವಣೆಗಳ ಹಿಂದೆ ಶಕ್ತಿಮೀರಿ ಕೆಲಸ ಮಾಡಿದ್ದ ರಂಜಿತ್ ಪೂಜಾರಿ ಅವರು ಅವರ ಗೆಲುವಿಗಾಗಿ ಶ್ರಮಿಸಿ ಯಶಸ್ಸು ಕಂಡವರು.
ಉದ್ಯಮಿಯಾಗಿ ಕೂಡಾ ಕ್ಷೇತ್ರದಾದ್ಯಂತ ಗಮನಸೆಳೆದಿರುವ ರಂಜಿತ್ ಪೂಜಾರಿ ಸರ್ವರೊಂದಿಗೂ ಒಡನಾಟ ,ಆತ್ಮೀಯತೆ ಬೆಳೆಸಿಕೊಂಡವರು.
ಪ್ರಸ್ತುತ ಬಿಜೆಪಿಯ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡ ಜವಾಬ್ಧಾರಿ ಹೊಂದಿರುವ ಅವರು ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡವರು.
ಈಗ ಚುನಾವಣೆ ನಡೆದರೂ ಈ ಕ್ಷೇತ್ರದಲ್ಲಿ ಹೆಚ್ಚು ಅವಕಾಶವಿರುವುದು ಬಿಜೆಪಿಗೆ ಎನ್ನುವ ವಾತಾವರಣವಿದೆ.ಹಾಗಾಗಿ ಈ ವಾತಾವರಣ ರಂಜಿತ್ ಅಥವಾ ಬಿಜೆಪಿಗೆ ಪೂರಕವಾಗಲಿದೆ.
ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಉಮಾನಾಥ ಕೋಟ್ಯಾನ್ ಅವರ ಬಗ್ಗೆ ಕ್ಷೇತ್ರದ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಸರಕಾರದಿಂದ ಹೀಗೂ ಅನುದಾನ ತರಬಹುದೆಂದು ಮೊದಲ ಅವಧಿಯಲ್ಲೇ ತೋರಿಸಿಕೊಟ್ಟಿದ್ದ ಕೋಟ್ಯಾನ್ ಅವರು ಇಲ್ಲಿ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಡೆವಲಪ್ಮೆಂಟ್ ಮಾಡಿದ್ದಾರೆ,ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನದೇ ಆದ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ.
ಈ ಕೊಡುಗೆಗಳು ಕೂಡಾ ಅವರ ಆಪ್ತ ರಂಜಿತ್ ಪೂಜಾರಿಯವರಿಗೆ ನೆರವಾಗಲಿದೆ.
ಶಾಸಕರೊಂದಿಗೆ ಪ್ರತೀ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿರುವುದನ್ನು, ಹಬ್ಬಗಳಿಗೆ ಶುಭಕೋರುವದನ್ನು ನೋಡುವಾಗ ರಂಜಿತ್ ಪೂಜಾರಿಯವರೇ ಮುಂದಿನ ಅಭ್ಯರ್ಥಿ ಎನ್ನುವುದು ಸ್ಪಷ್ಟವಾಗುತ್ತಿದೆ.
‘ಎಸ್ ಎಸ್ ಎಸ್ ಎಸ್ ಎಸ್,,,,, ಅವರೇ ಕ್ಯಾಂಡಿಡೇಟ್ ಬ್ರದರ್, ಒಕೇ ?…. ಥ್ಯಾಂಕ್ಯು ಬ್ರದರ್’ ಎಂದು ಹೇಳುವವರೂ ಬೆದ್ರದಲ್ಲೀಗ ಹೆಚ್ಚು ಇದ್ದಾರೆ.






