ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ *ಬೆದ್ರ ಸ್ಟಾಂಡಲ್ಲಿ ಮುಗಿಯದ ಪ್ರಾಬ್ಲೆಮ್ !

Picture of Namma Bedra

Namma Bedra

Bureau Report

ಇದು ಇನಿಕೋಡೆದ ಸಮಸ್ಯೆ ಅಲ್ಲ- ಮುಗಿಯಂದಿ ಸಮಸ್ಯೆ!
ಬಸ್ಸುನಿಲ್ದಾಣದಲ್ಲಿ ಸಿಕ್ಕಾಬಟ್ಟೆ ಪಾರ್ಕಿಂಗ್. ಎಷ್ಟು ಚೆಂದ ಪಾರ್ಕಿಂಗ್ ಮಾಡುತ್ತಾರೆಂದರೆ ಕನ್ವರ್ಷನ್ ಆದ ತಮ್ಮಜಾಗದಲ್ಲೇ ನಿಲ್ಲಿಸಿದಂತೆ ನಿಲ್ಲಿಸುತ್ತಾರೆ. ಹಾಗೆ ಪಾರ್ಕಿಂಗ್ ಮಾಡಿ ಹೋಗುವ ಕೆಲವರು ಮತ್ತೆ ಬರುವುದು ಸಂಜೆಗೆ.


ಈರೀತಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದರಿಂದ ಬಸ್ಸಿನವರಿಗೂ ಸಮಸ್ಯೆ, ಜನರಿಗೂ ಸಮಸ್ಯೆ ‌. ಹಾಗಂತ ಇಲ್ಲಿನ ಪೊಲೀಸರು, ಮುನ್ಸಿಪಾಲಿಟಿಯವರು ಕೆಲವು ಸಲ ಬಂದು ನೋಡಿ ಹೋಗಿದ್ದಾರೆ. ಆದರೆ ಇದುವರೆಗೂ ಒಂದು ಸರಿಗಟ್ಟಾದ ವ್ಯವಸ್ಥೆ ಮಾಡಲಿಕ್ಕಾಗಲಿಲ್ಲ ಎನ್ನುವುದೇ ಬೇಸರ.
ಹೀಗೆ ಇತರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್ಸಿನವರಿಗೆ ಹಿಂದೆ ತೆಗೆಯಲೂ ಆಗಲ್ಲ, ಮುಂದೆ ಹೋಗಲೂ ಆಗಲ್ಲ.
ಅದಕ್ಕೇ ಕಾಣ್ಬೇಕು, ಕೆಲವೊಮ್ಮೆ ಕೆಲವು ಬಸ್ಸುಗಳೂ ಅಡ್ಡಾದಿಡ್ಡಿಯಾಗಿ ನಿಲ್ಲುತ್ತದೆ!

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top