ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಅನಿತಾ ಆರ್.ಶೆಟ್ಟಿ ಅವರನ್ನು ಏಕಾಏಕಿ ಹಿಂಬಡ್ತಿಗೊಳಿಸಿರುವುದನ್ನು ವಿರೋಧಿಸಿ ಕಲ್ಲಬೆಟ್ಟು ಸೇ.ಸ.ಬ್ಯಾಂಕ್ ಎದುರು ನಾಳೆ ಪ್ರತಿಭಟನೆ ನಡೆಯಲಿದೆ.
ಸುಮಾರು ಮೂವತ್ತು ವರ್ಷಗಳಿಂದ ಈ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿರುವ ಅನಿತಾ ಶೆಟ್ಟಿ ಅವರು ಕಳೆದ ಹದಿನೈದು ವರ್ಷಗಳಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದೆ, ಯಾವುದೇ ಗೋಲ್ ಮಾಲ್ ನಡೆಯದಿದ್ದರೂ ಅವರಿಗೆ ಯಾವುದೇ ನೋಟೀಸು ನೀಡದೆ ದಿಢೀರ್ ಆಗಿ ಹಿಂಬಡ್ತಿಗೊಳಿಸಿರುವ ಹಿಂದಿರುವ ಉದ್ದೇಶವೇನು? ಎನ್ನುವುದು ಜನರ ಪ್ರಶ್ನೆಯಾಗಿದೆ .
ಇದೀಗ ಅವರ ಜಾಗಕ್ಕೆ ಸೂಪರ್ ವೈಸರ್ ಆಗಿರುವ ಸಂಜಯ್ ಎನ್ನುವವರಿಗೆ ಪ್ರಭಾರ ಅಧಿಕಾರ ವಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.ಆದರೆ ಹಾಗೆ ಸೂಪರ್ ವೈಸರ್ ಆದವರಿಗೆ ಪ್ರಭಾರ ಜವಾಬ್ದಾರಿ ನೀಡಲು ಅವಕಾಶವಿಲ್ಲವೆಂದೂ, ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಹಿರಿಯರಿಗೆ ಈ ಜವಾಬ್ದಾರಿ ನೀಡಬೇಕಿತ್ತೆನ್ನುವುದು ಸಹಕಾರಿ ಕಾನೂನು ಬಲ್ಲವರ ಅಭಿಪ್ರಾಯವಾಗಿದೆ .
ಇದೇ ಬ್ಯಾಂಕ್ ನಲ್ಲಿದ್ದ ಶಿರ್ತಾಡಿ ಪರಿಸರ ಈ ಬ್ಯಾಂಕ್ ನಿಂದ ಬೇರ್ಪಟ್ಟು ಪ್ರತ್ಯೇಕ ಸಹಕಾರಿ ಬ್ಯಾಂಕ್ ಆಗಿದೆ.ಅದಕ್ಕೆ ಚುನಾವಣೆಯೂ ನಡೆದಿದೆ.ಅದೆಲ್ಲಾ ಆದ ನಂತರವೇ ಈ ಬೆಳವಣಿಗೆ ನಡೆದಿದ್ದು ಬ್ಯಾಂಕ್ ಗ್ರಾಹಕರು,ಸದಸ್ಯರಲ್ಲಿ ಆಶ್ಚರ್ಯ ಉಂಟುಮಾಡಿದೆ.













