ಮೂಡುಬಿದಿರೆಯ ಹಿರಿಯ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಸದಸ್ಯೆಯನ್ನು ಗುರಿಯಾಗಿಸಿ ಮಾನಹಾನಿಯಾಗುವಂತಹ ಅನಾಮಧೇಯ ಪತ್ರ ಪ್ರಸಾರವಾಗುತ್ತಿರುವುದನ್ನು ಮೂಡುಬಿದಿರೆ ವಕೀಲರ ಸಂಘವು ಖಂಡಿಸಿದೆ.
ವಕೀಲರ ಸಂಘದ ಸದಸ್ಯರು ಈ ಬಗ್ಗೆ ತುರ್ತು ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಂಡು ಪ್ರಸ್ತುತ ಪ್ರಸಾರವಾಗಿರುವ ಸಂಗತಿ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡುವ ಇರಾದೆಯಿಂದಾಗಿದೆ,ದುಷ್ಕರ್ಮಿಗಳು ಈ ಕುಕೃತ್ಯದಿಂದ ಲಾಭ ಗಳಿಸುವ ಉದ್ದೇಶದಿಂದ ಮಾಡಿದ್ದಾಗಿದೆ ಎಂಬ ವಿಷಯವನ್ನು ಮನಗಂಡು ಈ ಸುಳ್ಳು ಪ್ರಚಾರದ ವಿರುದ್ಧ ತನಿಖೆಗೆ ಆಗ್ರಹಿಸಿದೆ.













