ಹುಬ್ಬಳ್ಳಿ ಬಳಿ ಬಸ್- ಲಾರಿ ಢಿಕ್ಕಿ: ಹೊಸಂಗಡಿಯ ಇಸಾಕ್ ಮೃತ್ಯು

Picture of Namma Bedra

Namma Bedra

Bureau Report

ಸೋಮವಾರ ರಾತ್ರಿ ಹುಬ್ಬಳ್ಳಿ ಸಮೀಪದ ನವಳಗುಂದ ಎಂಬಲ್ಲಿ ಸಂಭವಿಸಿದ ಬಸ್ಸು ಮತ್ತು ಲಾರಿ ಢಿಕ್ಕಿಯಲ್ಲಿ ಮೂಡುಬಿದಿರೆ ಸಮೀಪದ ಹೊಸಂಗಡಿಯ ಇಸಾಕ್ ( 55) ಅವರು ಮೃತಪಟ್ಟಿದ್ದಾರೆ.


ಬೆಳಗಾಮ್ ನಿಂದ ಹುಬ್ಬಳ್ಳಿ ರಸ್ತೆಯಾಗಿ ಬರುತ್ತಿದ್ದ ಗಣೇಶ್ ಹೆಸರಿನ ಖಾಸಗಿ ಬಸ್ಸು ನವಳಗುಂದ ಎಂಬಲ್ಲಿ ಲಾರಿಯೊಂದಕ್ಕೆ ಢಿಕ್ಕಿಯಾಗಿದೆ.
ಸೋಮವಾರ ರಾತ್ರಿ 9-30 ರ ವೇಳೆ ಸಂಭವಿಸಿದ ಈ ಅಪಘಾತದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದ್ದು ಅದರಲ್ಲಿ ಇಸಾಕ್ ಓರ್ವರು.
ವೃತ್ತಿಯಲ್ಲಿ ಬಸ್ ನಿರ್ವಾಹಕರಾಗಿದ್ದ ಇಸಾಕ್ ಅವರು ಬಸ್ಸಿನ ಎಡಬದಿಯಲ್ಲಿ ಕುಳಿತಿದ್ದು ಅಪಘಾತ ಸಂದರ್ಭದಲ್ಲಿ ಅವರ ತಲೆಭಾಗಕ್ಕೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top