ಮೂಡುಬಿದಿರೆಯ ನಿಡ್ಡೋಡಿ ಬಳಿಯ ನಿವಾಸಿ, ವಾಯ್ಸ್ ಅಫ್ ಆರಾಧನಾ ಸಂಸ್ಥೆಯ ಸ್ಥಾಪಕಿ ಪದ್ಮಶ್ರೀ ಭಟ್ ಅವರ ತಂದೆ ಸದಾಶಿವ ಭಟ್ ಅವರು ಕಳೆದ ಭಾನುವಾರ (ಸೆ.28) ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಈ ಹಿಂದೆ 28 ವರ್ಷಗಳ ಕಾಲ ಶ್ರೀ ಕ್ಷೇತ್ರ ಕಟೀಲಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.
ತಮ್ಮ ಇಳಿವಯಸ್ಸಿನಲ್ಲೂ ಚುರುಕಾಗಿ ಚಟುವಟಿಕೆಯಿಂದಿರುತ್ತಿದ್ದ ಅವರು ಮಹಾನಟಿ ಖ್ಯಾತಿಯ ಆರಾಧನಾ ಭಟ್ ಅವರ ಪ್ರೀತಿಯ, ಅಚ್ಚುಮೆಚ್ಚಿನ ಅಜ್ಜ. ತಮ್ಮ ಮೊಮ್ಮಗಳು ಆರಾಧನಾ ಮನೆಯಲ್ಲಿರುವ ವೇಳೆ ತಾನೂ ಮಗುವಾಗಿ ಅವಳ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದರು.
ಸದಾಶಿವ ಭಟ್ ಅವರು ಪದ್ಮಶ್ರೀ ಭಟ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.






