ವೈದ್ಯ| ಸಲೀಂ ಗರ್ಡಾಡಿ ಅವರಿಗೆ ‘ವಿಶ್ವ ಕನ್ನಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ’

Picture of Namma Bedra

Namma Bedra

Bureau Report

ವಂಶಪಾರಂಪರ್ಯ ಆಯುರ್ವೇದ ಪಂಡಿತ, ನಾಡಿ ತಜ್ಞ, ‘ ಕರ್ನಾಟಕ ವೈದ್ಯರತ್ನ’ ಪ್ರಶಸ್ತಿ ಪುರಸ್ಕೃತ ವೈದ್ಯ|ಸಲೀಂ ಗರ್ಡಾಡಿ ಅವರಿಗೆ ‘ ವಿಶ್ವ ಕನ್ನಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ‘ ಲಭಿಸಿದೆ.


ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಿಕಾರಿಪುರ ತಾಲೂಕು ಪಂಚಾಯತ್,ಗೊದ್ದನಕೊಪ್ಪ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಮಿತಿಗಳ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ ‘ಜಾನಪದ ಯುವಜನೋತ್ಸವ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.
ಮೂಡುಬಿದಿರೆ ಸಮೀಪದ ಗರ್ಡಾಡಿಯವರಾಗಿದ್ದು ಮೂಡುಬಿದಿರೆಯಲ್ಲಿ ಸಂಜೀವಿನಿ ಆಯುರ್ವೇದಿಕ್ ಸಂಸ್ಥೆಯನ್ನು ಹೊಂದಿರುವ ವೈದ್ಯ| ಎಂ.ಕೆ.ಗರ್ಡಾಡಿ ಅವರ ಪುತ್ರರಾಗಿರುವ ಸಲೀಂ ಗರ್ಡಾಡಿ ಅವರು ಪ್ರಸ್ತುತ ಚಿಕ್ಕಮಗಳೂರಿನಲ್ಲಿ ಅಮೃತ ಸಂಜೀವಿನಿ ಆಯುರ್ವೇದಿಕ್ ಸಂಸ್ಥೆಯನ್ನು ಮುಂದುವರಿಸುತ್ತಿದ್ದಾರೆ.
ವಂಶಪಾರಂಪರ್ಯ ಆಯುರ್ವೇದ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತೆ ಗಣನೀಯ ಸೇವೆ ಸಲ್ಲಿಸಿರುವ ಇವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top