ಅಗರಿ ‘ಹಬ್ಬ ಹಬ್ಬಗಳ ಉತ್ಸವ’ *8ನೇ ಹಂತದ 3 ನೇ ಡ್ರಾ

Picture of Namma Bedra

Namma Bedra

Bureau Report

ಅಗರಿ ಎಂಟರ್ ಪ್ರೈಸಸ್ (ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್) ಹಮ್ಮಿಕೊಂಡಿರುವ ‘ ಹಬ್ಬ ಹಬ್ಬಗಳ ಉತ್ಸವ’- ಪ್ರತಿದಿನ ಒಂದು ಬಹುಮಾನ, ನೂರುದಿನ ನೂರು ಬಹುಮಾನ ಯೋಜನೆಯ 8ನೇ ಹಂತದ 3ನೇ ಡ್ರಾ ಕಾರ್ಯಕ್ರಮವು ಮೂಡುಬಿದಿರೆ ಪ್ರೆಸ್ಟೀಜ್ ಟವರ್ ನಲ್ಲಿರುವ ಮೂಡುಬಿದಿರೆ ಶಾಖೆಯಲ್ಲಿ ನಡೆಯಿತು.
ಚೌಟರ ಅರಮನೆಯ ಕುಲದೀಪ್ ಎಂ.ಅವರು ಡ್ರಾ ನೆರವೇರಿಸಿದರು.
ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿಮ್ ಡಿಸೋಜ,ಆಟೋ ಚಾಲಕರ ಸಂಘದ ಅದ್ಯಕ್ಷ ದೀಪಕ್ ರಾಜ್,ಪತ್ರಕರ್ತ ಅಶ್ರಫ್ ವಾಲ್ಪಾಡಿ,ಶಿರ್ತಾಡಿ ಗ್ರಾ‌ಪಂ.ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ,ಯುವವಾಹಿನಿ ಕಾರ್ಕಳ ಘಟಕದ ಕಾರ್ಯದರ್ಶಿ ಸಂದೇಶ್ ಕೋಟ್ಯಾನ್,ಕಾರ್ಕಳ ಕೆ.ಸಿ.ಡಬ್ಲ್ಯೂ.ಇಂಡಸ್ಟ್ರೀಸ್ ಮಾಲಕ ಇಮ್ತಿಯಾಝ್,ಯೂಟ್ಯೂಬರ್ ವಿವಿಧ್ ಕುಮಾರ್,ಮಂಗಳೂರು ಮೇರಿಯನ್ ಕಾಲೇಜಿನ ಸಿಸ್ಟಮ್ ಎಡ್ಮಿನ್ ಇರ್ಷಾದ್,ಓಕ್ಸನ್ ಮೆನ್ಸ್ ವೇರ್ ಮಾಲಕ ಶಿವರಾಜ್,ರಮ್ಯಾ ಫ್ಯಾನ್ಸಿ ಮಾಲಕ ಆನಂದ ಇರುವೈಲು ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.


ಹಿಂದಿನ ಡ್ರಾ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಅಗರಿ ಎಂಟರ್‌ ಪ್ರೈಸಸ್ ನ ಮಾಲಕರಾದ ಅಗರಿ ರಾಘವೇಂದ್ರರಾವ್ ಅವರು ಸ್ವಾಗತಿಸಿ ಸಂಸ್ಥೆ ಮತ್ತು ಸಂಸ್ಥೆ ಗ್ರಾಹಕರಿಗೆ ಹಮ್ಮಿಕೊಂಡ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ವಾದಿರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು. ಮೆನೇಜರ್ ಸುನಿಲ್ ಕುಮಾರ್ ಸಹಿತ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top