ತುಳುನಾಡ ಸೇನೆ ವತಿಯಿಂದ ಮಿಜಾರು ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರ ಸಾರಥ್ಯದಲ್ಲಿ ‘ಸ್ನೇಹಕೂಟ ಕಂಬಳ’ವು ಅ.5
ರಂದು ಕಡಲಕೆರೆ ನಿಸರ್ಗಧಾಮ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೂಡುಬಿದಿರೆಯಲ್ಲಿ ಇದೇ ಮೊದಲಬಾರಿಗೆ ಅತ್ಯಂತ ವಿಜೃಂಭಣೆಯಿಂದ ಸ್ನೇಹಕೂಟ ಕಂಬಳ ನಡೆಯಲಿದ್ದು ಇತರ ಕಂಬಳದಂತೆಯೇ ಈ ಕಂಬಳದಲ್ಲಿ ಜನ ಸೇರುವ ನಿರೀಕ್ಷೆಯಿದೆ.
ಹಗ್ಗ ಕಿರಿಯ,ನೇಗಿಲು ಕಿರಿಯ ಹಾಗೂ ನೇಗಿಲು ಸಬ್ ಜ್ಯೂನಿಯರ್ ವಿಭಾಗದಲ್ಲಿ ಈ ಕಂಬಳ ನಡೆಯಲಿದ್ದು ವಿಜೇತರಿಗೆ ಚಿನ್ನದ ಪದಕ, ನಗದು ಮತ್ತು ಶಾಶ್ವತ ಫಲಕದ ಬಹುಮಾನವಿದೆ.
ಮುಂಬೈ ಉದ್ಯಮಿಯಾಗಿರುವ ದೋಟ ಸುರೇಶ್ ಶೆಟ್ಟಿ ಅವರು ಕೆಲ ವರ್ಷದ ಹಿಂದೆ ಮೂಡುಬಿದಿರೆಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿಸಿ ಗಮನಸೆಳೆದಿದ್ದರು.ಇದೀಗ ಮತ್ತೊಂದು ಅದ್ದೂರಿಯ ಕಾರ್ಯಕ್ರಮಕ್ಕೆ ಮುಂದಾಗಿದ್ದು ಮೂಡುಬಿದಿರೆಯಾದ್ಯಂತ ಭಾರೀ ಪ್ರಚಾರ ಪಡೆದಿದೆ.










