ಅಂಗನವಾಡಿ ಕಾರ್ಯಕರ್ತೆಯರಿಗೆ ವೇದಿಕೆ ಒದಗಿಸಿಕೊಟ್ಟ ಮಿಥುನ್ ರೈ ಅಭಿಮಾನಿ ಬಳಗ !

Picture of Namma Bedra

Namma Bedra

Bureau Report

ಇದೊಂದು ಡಿಫರೆಂಟಾದ ಪ್ರೋಗ್ರಾಂ. ಕೆಪಿಸಿಸಿ ಕಾರ್ಯದರ್ಶಿ, ಯುವ ನಾಯಕ ಮಿಥುನ್ ರೈ ಅವರ ಜನುಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ನೀಡುವ ಜೊತೆಗೆ ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿರುವುದು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಕುಷಿ ನೀಡಿದೆ.


ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ನಿಜಕ್ಕೂ ಅಸಾಧಾರಣವಾದದ್ದು.ಪ್ರತೀ ಊರಲ್ಲೂ ಅವರ ಸೇವೆ ಏನೆಂಬುವುದು ಜನರಿಗೆ ತಿಳಿದಿದೆ.ಆದರೆ ಅಂತಹ ಸೇವಕರನ್ನು ಗುರುತಿಸುವವರು ಕಡಿಮೆ.ಆ ನಿಟ್ಟಿನಲ್ಲಿ ಮಿಥುನ್ ರೈ ಅಭಿಮಾನಿ ಬಳಗವು ಅವರನ್ನು ಗುರುತಿಸಿ ಗೌರವಿಸಿರುವುದು ಈ ಭಾಗದ ದಾಖಲೆಯ ಕಾರ್ಯಕ್ರಮಗಳಲ್ಲೊಂದಾಗಿದೆ. ಮಿಥುನ್ ರೈ ಅವರ ಜನುಮದಿನದ ಪ್ರಯುಕ್ತ ಹಮ್ಮಿಕೊಂಡ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮಾಹಿತಿ ಮತ್ತು ಆರೋಗ್ಯ ಕಾರ್ಡ್ ವಿತರಿಸಿರುವುದು ಅವರ ಆರೋಗ್ಯ ಕಾಳಜಿಯಲ್ಲೂ ಗಮನಹರಿಸಿದೆ.ಜೊತೆಗೆ ಅವರಿಗೆ ನೀಡಲಾದ ಆರೋಗ್ಯ ಕಾರ್ಡ್ ಕೂಡಾ ಪ್ರಯೋಜನಕಾರಿಯಾಗಿದೆ.


ಪುಟ್ಟ ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವಲ್ಲಿ, ಒಂದು ಡ್ಯಾನ್ಸನ್ನು ಆ ಮಕ್ಕಳಿಂದ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯರು ಬಹಳಷ್ಟು ಶ್ರಮಪಡುತ್ತಾರೆ.ಆದರೆ ಅವರಲ್ಲೂ ಇರುವ ಪ್ರತಿಭೆಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ.ಈ ನಿಟ್ಟಿನಲ್ಲಿ ಮಿಥುನ್ ರೈ ಅಭಿಮಾನಿ ಬಳಗವು ಅವರಿಗೂ ಒಂದು ವೇದಿಕೆ ಕೊಟ್ಟು ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದೆ.
ಒಂದೊಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಒಂದು ತಂಡವಾಗಿ ಜನಪದ ಗೀತೆಗಳಿಗೆ ಹೆಜ್ಜೆ ಹಾಕಿ ಕುಣಿದರು,ಇನ್ನು ಕೆಲವರು ಭಾವಗೀತೆ,ಜನಪದಗೀತೆ ಹಾಡುವ ಮೂಲಕ ಗಮನಸೆಳೆದರು.
ಇದು ಬರೀ ಹೀಗೇ ಸುಮ್ಮನೆ ಆಗಿರಲಿಲ್ಲ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಕೂಡಾ ಇತ್ತು.
ಆರೋಗ್ಯ ಕಾರ್ಡ್ ಜೊತೆಗೆ ಭಾಗವಹಿಸಿದವರೆಲ್ಲರಿಗೂ ಗೌರವ ಸ್ಮರಣಿಕೆ,ಕುಡಿವ ನೀರಿನ ಪ್ಲಾಸ್ಕ್, ಸೀರೆ ನೀಡಿ ಗೌರವಿಸಿರುವುದು ಈ ಕಾರ್ಯಕ್ರಮದ ವಿಶೇಷ.
ಅಂದಹಾಗೆ ಈ ಯಶಸ್ವೀ ಕಾರ್ಯಕ್ರಮದ ಹಿಂದೆ ಮಿಥುನ್ ರೈ ಅಭಿಮಾನಿ ಬಳಗದ ಒಂದು ತಂಡವು ಬಹಳಷ್ಟು ಶ್ರಮಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top