ಇದು ಇಂದು ಬೆಳಿಗ್ಗೆ ಮೂಡುಬಿದಿರೆಯಲ್ಲಿ ಕಂಡು ಬಂದ ದೃಶ್ಯ.ಬೆದ್ರದ ಕೆಲವು ರಸ್ತೆಗಳಲ್ಲಿ ಇಂದು ಫುಲ್ ರಶ್. ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ. ಇನ್ನು ಕೆಲವೆಡೆ ಎಲ್ಲಿ ಸುಲಭ ಇದೆ,ಎಲ್ಲಿಂದ ಕೈತಲ್ ಆಗುತ್ತದೆ ಎಂದು ಒಟ್ರಾಸಿ ತಮ್ಮ ವಾಹನಗಳನ್ನು ನೋ ಎಂಟ್ರಿಯಲ್ಲೂ ಪೊಗ್ಗಿಸಿದವರಿಗೆ ಇನ್ಸ್ಪೆಕ್ಟರ್ ಸಂದೇಶ್ ಅವರ ಲಾಠಿ ದರ್ಶನ. ಒಟ್ರಾಸಿ ಬಂದವರು ಒಟ್ರಾಸಿ ಗಡಿಬಿಡಿ.ಲಾಠಿಯನ್ನು ಕಂಡಕೂಡಲೇ ಪೆರ್ಚಿಕಟ್ಟಿ ಪಿರ ಪೋವರೆಲಾ ಅತ್ತ್,ದುಂಬು ಪೋವರೆಲಾ ಅತ್ತ್ ಎಂಬ ಪರಿಸ್ಥಿತಿ.



ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಖುದ್ದಾಗಿ ಇನ್ಸ್ಪೆಕ್ಟರ್ ಸಂದೇಶ್ ಅವರೇ ಲಾಠಿಯೊಂದಿಗೆ ಬಂದು ಇತರ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮತ್ತೊಮ್ಮೆ ಗಮನಸೆಳೆದಿದ್ದಾರೆ.
ಹೆಲ್ಮೆಟ್ ಧರಿಸದವರಿಗೆ,ನೋ ಎಂಟ್ರಿಯಲ್ಲಿ ಬಂದವರಿಗೆ ಪೆಟ್ಟು ಬೇಡ-ಅವರ ಮಾಮೂಲು ಮಾತುಗಳ ‘ಸಂದೇಶ’ವೇ ಸಾಕು!








