ಮೂಡುಬಿದಿರೆ: ನಾಳೆ ಲಕ್ಸುರಿ ಲಿವಿಂಗ್ ನೂತನ ಮಳಿಗೆಯ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಹಿತ ವಿವಿಧ ಜಿಲ್ಲೆಗಳಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಫರ್ನಿಚರ್ಸ್,ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ‌ ಲಕ್ಕಿ ಸ್ಕೀಮ್ ಸಂಸ್ಥೆ ‘ಬಾವಚ್ಚಾಸ್ ಲಕ್ಸುರಿ ಲಿವಿಂಗ್‌’ ಇದರ ನೂತನ ಮಳಿಗೆಯ ಉದ್ಘಾಟನಾ ಸಮಾರಂಭವು ನಾಳೆ ಸಂಜೆ 3 ಗಂಟೆಗೆ ಮೆಸ್ಕಾಂ ಹತ್ತಿರದ ಕಟ್ಟಡದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಬದ್ರುದ್ದೀನ್ ಅವರು ತಿಳಿಸಿದ್ದಾರೆ.
ಡಾ.ಎಂ.ಮೋಹನ ಆಳ್ವ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದು ಶಾಸಕ ಉಮಾನಾಥ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂಡುಬಿದಿರೆ ಜುಮ್ಮಾ ಮಸೀದಿ ಖತೀಬರಾದ ಶರೀಫ್ ದಾರಿಮಿ ಹಾಗೂ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಅಮರಶ್ರೀ ಅಮರನಾಥ ಶೆಟ್ಟಿ, ಆಲ್ವಿನ್ ರೊಡ್ರಿಗಸ್,ಯಾದವ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ,ಅಬ್ದುಸ್ಸಲಾಮ್ ತೋಡಾರ್,ಅಬ್ದುರ್ರಹ್ಮಾನ್ (ಅಬ್ಬಾಕ),ಕೆನರಾ ಬ್ಯಾಂಕ್ ಮೆನೇಜರ್ ಶಿವಾನಂದ,ಅಬ್ದುಲ್ ರಹ್ಮಾನ್, ಹನೀಫ್ ರಹ್ಮಾನಿಯ,ನಿವೃತ್ತ ಮುಖ್ಯ ಶಿಕ್ಚಕಿ ಪ್ರಫುಲ್ಲ ಎಂ.ಶೆಟ್ಟಿ ಹಾಗೂ ನ್ಯಾಯವಾದಿ ಇರ್ಷಾದ್ ಎನ್‌.ಜಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 4 ರಿಂದ 3 ಮತ್ತು 4 ನೇ ಆವೃತ್ತಿಯ ಗ್ರಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು ಸ್ವರ ಸಾಹಿತ್ಯ ಸಂಗಮ ಕಲಾವಿದರಿಂದ ಸಂಗೀತ ರಸಮಂಜರಿ,ಅನೀಶ್ ಎಂ.ಜೆ.ಸಾರಥ್ಯದ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಕಲಾಶ್ರೀ ಬೆದ್ರ ತಂಡದವರಿಂದ ‘ಕುಸಲ್ದ ಕುರ್ಲರಿ’ ಎಂಬ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 6-30 ರಿಂದ ವಿಜೇತರ ಆಯ್ಕೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.ನಿವೃತ್ತ ಮುಖ್ಯೋಪಾಧ್ಯಾಯರಾದ ಆಂಡ್ರೂ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಅಬುಲಾಲ್ ಪುತ್ತಿಗೆ, ಹರ್ಷವರ್ಧನ ಪಡಿವಾಳ್ ಸಹಿತ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಬದ್ರುದ್ದೀನ್ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top