ಮೂಡುಬಿದಿರೆಯಲ್ಲಿ ಇಂದು ಸುದ್ದಿಲ್ಲದೆ ಬಂದ ಭಾರೀ ಗಾಳಿ,ಮಳೆಗೆ ಅಲ್ಲಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾದರೆ ಇನ್ನು ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.



ಮೂಡುಬಿದಿರೆ ಸಮಾಜ ಮಂದಿರ ಬಳಿ ಹಾಕಲಾಗಿದ್ದ ‘ಆಣ್ ಮಗೆ’ ನಾಟಕದ ಫ್ಲೆಕ್ಸ್ ಮೇಲೆ ವಿದ್ಯುತ್ ಕಂಬವೊಂದು ಬಾಗಿ ಬಿದ್ದಿದ್ದು ಫ್ಲೆಕ್ಸ್ ನ ಬಲದಲ್ಲಿದೆ.ಅಲ್ಲೇ ಪಕ್ಕದಲ್ಲಿ ಮರವೊಂದು ಬಿದ್ದಿದ್ದು ಯಾರಿಗೂ ಅಪಾಯ ಸಂಭವಿಸಲಿಲ್ಲ.
ಅಲಂಗಾರು ರಸ್ತೆಯಲ್ಲಿ ಮರವೊಂದು ರಸ್ತೆಗೆ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಅಲಂಗಾರ್ ನ ಮನೆಯೊಂದರ ಮೇಲೆ ಮರ ಬಿದ್ದಿದೆ.ಸ್ಥಳಕ್ಕೆ ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಭೇಟಿ ನೀಡಿದ್ದಾರೆ.






