‘ಡೆಂಜಿ ಪತ್ತಿನಾರ್ ಪಿಲಿ ಪತ್ತಂದೆ ಕುಲ್ಲರಾ’ …! *ಬೆದ್ರ ಪುರಸಭಾ ಕೊನೆಯ ಅಧಿವೇಶನದಲ್ಲಿ ‘ಕುಸಲ್ದ ಕುರ್ಲರಿ’ !

Picture of Namma Bedra

Namma Bedra

Bureau Report

ಮೂಡುಬಿದಿರೆ ಪುರಸಭೆಯ ಐದು ವರ್ಷಗಳ ಅವಧಿಯ ಕೊನೆಯ ಮಾಸಿಕ ಸಭೆ ಇಂದು ( ಬುಧವಾರ) ಪುರಸಭಾಧ್ಯಕ್ಷೆ ಜಯಶ್ರೀ ಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆಲವು ಗಂಭೀರ ಚರ್ಚೆಗಳು, ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಪಾತೆರ-ಕತೆ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದ್ದು ಒಂದೆಡೆಯಾದರೆ ಕೆಲವು ಕುಸಲ್ದ ಕುರ್ಲರಿಗಳೂ ಬೋರ್ ಆಗುವುದನ್ನು ತಪ್ಪಿಸಿತು.


ಆರಂಭದಲ್ಲೇ ಸದಸ್ಯ ರಾಜೇಶ್ ನಾಯ್ಕ್ ಅವರು ‘ ಮಚ್ಲಿ ಹೊಟೇಲ್ ನ ಗಲೀಜು ನೀರು ಪಕ್ಕದ ಬಾವಿಗೆ ಹೋಗುತ್ತಿದ್ದು ಆ ಪರಿಸರದ ಜನರ ಕುಡಿವ ನೀರಿಗೆ ಸಮಸ್ಯೆಯಾಗಿದೆ, ಅಲ್ಲಿಗೆ ಪರಿಶೀಲಿಸಲೆಂದು ಹೋದರೆ ಕಾಂತಾರ ಸಿನೆಮಾದ ಡೈಲಾಗ್ ನಂತೆ ನಿಮ್ಮನ್ನು ಗುಳಿಗೆ ನೋಡಲಿ,ಮಂತ್ರದೇವತೆ ನೋಡಲಿ ಎಂದು ಶಾಪ ಹಾಕುತ್ತಾರೆ’ ಎಂದು ಆರೋಪಿಸಿದಾಗ ಎಲ್ಲರಲ್ಲೂ ತೆಲಿಕೆದ ಪನಿಪನಿ ಬರ್ಸ !


ಅದೇ ರಾಜೇಶ್ ನಾಯ್ಕ್ ಅವರು ಸದಸ್ಯ ಕೊರಗಪ್ಪರಿಗೆ ‘ ಈರ್ ಎಲ್ಯ ಇಪ್ಪುನಗ ಡೆಂಜಿ ಪತ್ತಿನಾರ್, ಇತ್ತೆ ಪಿಲಿ ಪತ್ತಂದೆ ಕುಲ್ಲರಾ’ ? ಎಂದಾಗ ಮತ್ತೊಮ್ಮೆ ಸಭೆಯಲ್ಲಿ ತೆಲಿಕೆದ ಗೊಂಚಿಲ್ !
‘ಹೊಸ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯವರು ಬಂದ ನಂತರ ಕಸ ಬಿಸಾಡುವವರ ಸಂಖ್ಯೆ ಹೆಚ್ಚಾಗಿದೆ,ಅಂದರೆ ನೀವಿಬ್ಬರೂ ಪಾಪದವರೆಂದು ಅವರಿಗೆ ಗೊತ್ತಿದೆ’ ಎಂದು ಸದಸ್ಯ ಸುರೇಶ್ ಪ್ರಭು ಅವರು ಹೇಳಿದಾಗ ಸಭೆಯಲ್ಲಿ ತೆಲಿಕೆ- ಬಂಜಿ ನಿಲಿಕೆ !
ಕಸ,ತ್ಯಾಜ್ಯ, ಮಾರ್ಕೆಟ್ ಕಟ್ಟಡ,ದಾರಿದೀಪ ಹೀಗೆಲ್ಲಾ ಚರ್ಚೆ ನಡೆಯಿತು.
ಕ್ರೀಡಾಂಗಣ ,ಉದ್ಯಾವನ ವಿಷಯಕ್ಕೆ ಸಂಬಂಧಿಸಿ ಆಡಳಿತ ಪಕ್ಷದ ಸದಸ್ಯೆ , ಮಾಜಿ ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್ ಹಾಗೂ ಪುರಸಭಾಧ್ಯಕ್ಷೆ ಜಯಶ್ರೀ ಅವರ ನಡುವೆ ಒಂತೆ ಒಂತೆ ಪಾತೆರಕತೆ ಆಯಿತು.
ಉಪಾಧ್ಯಕ್ಷ ನಾಗರಾಜ್ ಪೂಜಾರಿ,ಹಿರಿಯ ಸದಸ್ಯ ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ಇಕ್ಬಾಲ್ ಕರೀಮ್, ಕೊರಗಪ್ಪ,ಪುರಂದರ ದೇವಾಡಿಗ ,ಮಮತಾ ಆನಂದ್,ಜೊಸ್ಸಿ ಮಿನೇಜಸ್,ಪ್ರಸಾದ್ ಕುಮಾರ್, ಶ್ವೇತಾ,ಶಕುಂತಲಾ ದೇವಾಡಿಗ,ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ದಿವ್ಯ ಜಗದೀಶ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ನಳಿನ್ ಕುಮಾರ್ ಸಹಿತ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
( ಹೆಚ್ಚಿನ ವಿವರಗಳು ನಾಳಿನ ದಿನಪತ್ರಿಕೆಗಳಲ್ಲಿ ಬರುತ್ತದೆ)

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top