ಸಮಾಜ ಮಂದಿರ ಸಭಾ ಮತ್ತು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ನಾಲ್ಕನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ ನಾಳೆ (ಶನಿವಾರ) ಸಂಜೆ 4 ರಿಂದ ಸಮಾಜ ಮಂದಿರದಲ್ಲಿ ನಡೆಯಲಿದೆ.
ಆಧುನಿಕ ಗೂಡುದೀಪ,ಸಾಂಪ್ರದಾಯಿಕ ಗೂಡುದೀಪ, ಮಾದರಿ ಗೂಡುದೀಪ ಈ ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನವಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಹಾಗೂ ಯುವವಾಹಿನಿ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರು ತಿಳಿಸಿದ್ದಾರೆ.






