ಮುನ್ಸಿಪಾಲಿಟಿ ಲಾಸ್ಟ್ ಮೀಟಿಂಗ್ *ನೆಕ್ಸ್ಟ್ ಯಾರು ಬರ್ತಾರೋ ಗೊತ್ತಿಲ್ಲ!

Picture of Namma Bedra

Namma Bedra

Bureau Report

ಇದು ಮೊನ್ನೆ ಬುಧವಾರ ಕಂಡು ಬಂದ ಲಾಸ್ಟ್ ಸೀನ್. ನೆಕ್ಸ್ಟ್ ಇದೇ ಸೀನ್ ಕಂಡುಬರಲು ಸಾಧ್ಯವಿಲ್ಲ.ಮೂಡುಬಿದಿರೆ ಪುರಸಭೆಗೆ ಮುಂದೆ ಅದ್ಯಾರೆಲ್ಲಾ ಎಲೆಕ್ಟ್ ಆಗಿ ಬರ್ತಾರೋ ಗೊತ್ತಿಲ್ಲ.


ಮೂಡುಬಿದಿರೆ ಪುರಸಭೆಯ ಐದು ವರ್ಷಗಳ ಅಧಿಕಾರಾವಧಿ ನವೆಂಬರ್ 7 ಕ್ಕೆ ಮುಕ್ತಾಯಗೊಳ್ಳಲಿದೆ.ಕಳೆದ ಐದು ವರ್ಷಗಳ ಅವಧಿ ಮುಕ್ತಾಯಗೊಂಡಿದೆ.ಹಾಗಾಗಿ ಕಳೆದ ಬುಧವಾರ ನಡೆದ ಅಧಿವೇಶನವೇ ಲಾಸ್ಟ್. ಇನ್ನು ಚುನಾವಣೆ ನಡೆದು ಸದಸ್ಯರು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾದ ಬಳಿಕ ಪುರಸಭಾಧಿವೇಶನ ನಡೆಯಲಿದೆ.
23 ಸದಸ್ಯಬಲದ ಮೂಡುಬಿದಿರೆ ಪುರಸಭೆಗೆ ಐದು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 11 ಸ್ಥಾನಗಳನ್ನು ಗಳಿಸಿತ್ತು. ಒಂದು ಸ್ಥಾನ ಹೆಚ್ಚು ಗಳಿಸಿದ್ದ ಬಿಜೆಪಿ ಮೂಡುಬಿದಿರೆ ಪುರಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು.
ನಾಗರಾಜ್ ಪೂಜಾರಿ, ಸುಜಾತಾ ಶಶಿಕಿರಣ್, ಜಯಶ್ರೀ ಕೇಶವ,ಪ್ರಸಾದ್ ಕುಮಾರ್, ಶ್ವೇತಾ,ರಾಜೇಶ್ ನಾಯ್ಕ್,ಜಯಶ್ರೀ, ದಿವ್ಯ ಜಗದೀಶ್, ಸೌಮ್ಯ ಶೆಟ್ಟಿ, ನವೀನ್ ಶೆಟ್ಟಿ,ಸ್ವಾತಿ ಪ್ರಭು ಹಾಗೂ ಧನಲಕ್ಷ್ಮಿ ಅವರು ಬಿಜೆಪಿಯಿಂದ ಆಯ್ಕೆಗೊಂಡಿದ್ದ ಸದಸ್ಯರು.
ಕಾಂಗ್ರೆಸ್ ನಿಂದ ಪಿ.ಕೆ.ಥಾಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಕೊರಗಪ್ಪ,ಪುರಂದರ ದೇವಾಡಿಗ,ಜೊಸ್ಸಿ ಮಿನೇಜಸ್, ಮಮತಾ ಆನಂದ್,ರೂಪಾ ಸಂತೋಷ್ ಶೆಟ್ಟಿ, ಶಕುಂತಲಾ ಹರೀಶ್, ಇಕ್ಬಾಲ್ ಕರೀಮ್ ಹಾಗೂ ಹಿಮಾಯತ್ ಅವರು ಆಯ್ಕೆಯಾಗಿದ್ದರು.
ಈ 23 ರ ಪೈಕಿ ಮಾಸಿಕ ಸಭೆಗಳಲ್ಲಿ ಅತ್ಯಂತ ಹೆಚ್ಚು ಮಾತನಾಡಿದವರು, ಕಡಿಮೆ ಮಾತನಾಡಿದವರು ಮತ್ತು ಏನೂ ಮಾತನಾಡದೇ ಇದ್ದವರೂ ಇದ್ದಾರೆ.
ಮೊದಲ ಅವಧಿಯಲ್ಲಿ ಪ್ರಸಾದ್ ಕುಮಾರ್ ಅಧ್ಯಕ್ಷರಾಗಿ, ಸುಜಾತಾ ಶಶಿಕಿರಣ್ ಉಪಾಧ್ಯಕ್ಷರಾದರೆ ಎರಡನೇ ಅವಧಿಗೆ ಜಯಶ್ರೀ ಕೇಶವ್ ಅಧ್ಯಕ್ಷರಾಗಿ, ನಾಗರಾಜ್ ಪೂಜಾರಿ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.
ಮೊದಲನೇ ಅವಧಿಯಲ್ಲಿ ನಾಗರಾಜ್ ಪೂಜಾರಿ ಅವರು ಸ್ಥಾಯಿ ಸಮಿತಿಯ ಅಧ್ಯಕ್ಷರಾದರೆ ಎರಡನೇ ಅವಧಿಗೆ ಸ್ವಾತಿ ಪ್ರಭು ಅವರು ಆಯ್ಕೆಯಾಗಿದ್ದರು.
ಐದು ವರ್ಷಗಳಲ್ಲಿ ನಡೆದ ಪುರಸಭಾಧಿವೇಶನಗಳಲ್ಲಿ ಕೆಲವು ಗಂಭೀರ ಚರ್ಚೆಗಳು, ಮಾತಿನ ಚಕಮಕಿ, ಹಾಸ್ಯ ಚಟಾಕಿಗಳು, ಅನುದಾನ,ಅಭಿವೃದ್ಧಿ ವಿಷಯಗಳಲ್ಲಿ ಚರ್ಚೆಗಳು ನಡೆದಿತ್ತು.
ಈ‌ ಪುರಸಭಾಡಳಿತದ ಕೊನೆಯ ದಿನಗಳಲ್ಲಿ ಬೆದ್ರದ ಮಾರ್ಕೆಟ್ ಕಟ್ಟಡದ ಕೆಲಸ ಪುನರಾರಂಭಗೊಂಡಿದೆ.
ಅಭಿವೃದ್ಧಿ ಕೆಲಸಗಳು ಸಾಕಷ್ಟು ನಡೆದಿದೆ.ಅದರ ನಡುವೆ ಆಗಲೇಬೇಕಿದ್ದ ಕೆಲವು ಕೆಲಸಗಳು ಬಾಕಿಯಾಗಿಯೇ ಉಳಿದಿದೆ.ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿಯವರಂತಹ ಅನುಭವೀ ಸದಸ್ಯರಿಂದ ಪುರಸಭಾಡಳಿತವು ಐದು ವರ್ಷಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಬಿಜೆಪಿ- ಕಾಂಗ್ರೆಸ್ ಅಂತ ಅಧಿವೇಶನಗಳಲ್ಲಿ ಕಂಡು ಬರುತ್ತಿತ್ತಾದರೂ ಎಲ್ಲರೂ ಆತ್ಮೀಯತೆಯಿಂದ ಇದ್ದು ,ಪರಸ್ಪರ ಹೊಂದಾಣಿಕೆಯಿಂದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಇದು ಉತ್ತಮ ಬೆಳವಣಿಗೆ.
ಮುಂದೆ ಯಾರೆಲ್ಲ ಆಯ್ಕೆಯಾಗುತ್ತಾರೆ,ಯಾರೆಲ್ಲಾ ಸೋಲುತ್ತಾರೆ ಎನ್ನುವುದು ಗೊತ್ತಿಲ್ಲ.ಕೆಲವರಿಗೆ ಮುಂದೆ ಅವಕಾಶವಿಲ್ಲವೆಂದೂ ಹೇಳಲಾಗುತ್ತಿದೆ.
ಏನೂ ಮಾತನಾಡದೆ ಕೇವಲ ಅಂಬಡೆ ,ಶೀರ ತಿಂದು ಹೋಗುವಂತವರು ಆಯ್ಕೆಯಾಗಲೇಬಾರದು‌.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top