ಬೆದ್ರ ಪಟ್ಟಣದ ನಡುವಲ್ಲೊಂದು ಬೆಂಕಿಪೊಟ್ಟಣ!

Picture of Namma Bedra

Namma Bedra

Bureau Report

ಇದು ಮೂಡುಬಿದಿರೆ ಪುರಸಭೆಯ ನಿರ್ಮಾಣ ಹಂತದ ಹೊಸ ವಾಣಿಜ್ಯ ಸಂಕೀರ್ಣ. ಮಂಗಳೂರು ಮೂಲದ ಗುತ್ತಿಗೆದಾರನೊಬ್ಬ ಇದರ ಗುತ್ತಿಗೆದಾರ.
ಜನರು ಹೇಳುವುದಕ್ಕೂ ಕಟ್ಟಡ ನಿರ್ಮಾಣವಾಗಿರುವುದಕ್ಕೂ ಸರಿಯಿದೆ. ಅಂದರೆ ಇದು ಸೇಮ್ ಬೆಂಕಿಪೊಟ್ಟಣವೆ.


ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಮೊನ್ನೆ ನಡೆದ ಪುರಸಭಾಧಿವೇಶನದಲ್ಲಿ ಹಿರಿಯ ಸದಸ್ಯ ಸುರೇಶ್ ಕೋಟ್ಯಾನ್ ಅವರು ಫೊಟೋ ಸಮೇತ ವಿವರಿಸಿದ್ದಾರೆ.
“ಕೋಟ್ಯಂತರ ರೂಪಾಯಿ ಬೆಲೆಬಾಳುವ ಈ ಜಾಗದಲ್ಲಿ ಇಷ್ಟು ಸಣ್ಣದಾದ ಕಟ್ಟಡ ನಿರ್ಮಾಣವಾಗುತ್ತದೆ,ಅದರೊಳಗಿನ ಅಂಗಡಿ ಕೋಣೆಗಳೆಲ್ಲಾ ಹಕ್ಕಿಗೂಡಿನಂತದ್ದು ಎಂದು ನಮಗಾರಿಗೂ ಮಾಹಿತಿ ಇಲ್ಲ, ಈ ಬಗ್ಗೆ ಪುರಸಭೆಯಲ್ಲಿ ಚರ್ಚೆಯೂ ಆಗಿಲ್ಲ, ಜನರಿಗೆ ಪ್ರಯೋಜನವಾಗದ ಈ ಕಟ್ಟಡ ಪುರಸಭೆಗೆ ಬೇಕಿತ್ತಾ” ಎಂದು ಪ್ರಶ್ನಿಸಿದ್ದಾರೆ.
ಬಸ್ಟಾಂಡ್ ಪಕ್ಕದಲ್ಲೇ ನಿರ್ಮಾಣವಾದ ಈ ಕಟ್ಟಡ ಬಾರೀ ಡಿಮಾಂಡ್ ಗಳಿಸಬೇಕಿತ್ತು,ಆದರೆ ಆರಂಭದಲ್ಲೇ ಕೆಲವೊಂದು ಅವ್ಯವಸ್ಥೆಗಳಿಂದಾಗಿ ಬೇಡಿಕೆ ಕಳೆದುಕೊಂಡಿದೆ.
ಒಂದು ಒಳ್ಳೆಯ ವಾಣಿಜ್ಯ ಸಂಕೀರ್ಣವಾಗಿ ಪುರಸಭೆಗೆ ಆದಾಯ ತರಬೇಕಿದ್ದ ಈ ಕಟ್ಟಡ ಆರಂಭದಲ್ಲೇ ಯಾವ ಪ್ರಯೋಜನಕ್ಕೂ ಬಾರದು ಎಂಬಂತಾಗಿದೆ, ಅವ್ಯವಸ್ಥೆಗಳಿರುವ ಕಟ್ಟಡದ ಕೋಣೆಗಳನ್ನು ಯಾರಾದರೂ ಖರೀದಿಸುತ್ತಾರಾ ಎಂದು ಪ್ರಶ್ನಿಸಿರುವ ಅವರು ಪುರಸಭೆಗೆ ನಷ್ಟವಾಗುವ ಮುನ್ನ ಮತ್ತೊಮ್ಮೆ ಚರ್ಚೆಯಾಗಿ ಈ ಕಟ್ಡಡಕ್ಕೆ ಹೊಸರೂಪ ಕೊಡಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಕೆಚ್ ತಯಾರಿಸುವ ಇಂಜಿನಿಯರ್ ಗಾಗಲೀ, ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನಿಗಾಗಲೀ ಇದು ‘ಬೆಂಕಿಪೆಟ್ಟಿಗೆ’ಯಂತಾಗುತ್ತದೆ ಎಂದು ಮಂಡೆಗೆ ಹೋಗದಿರುವುದೇ ಆಶ್ಚರ್ಯ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top