‘ನಮ್ಮಬೆದ್ರ’ ದೀಪಾವಳಿ ವಿಶೇಷಾಂಕ- 2025 ರ ಬಿಡುಗಡೆ ಸಮಾರಂಭವು ಪತ್ರಿಕಾ ಕಚೇರಿ ಬಳಿ ನಡೆಯಿತು.
ಮೂಡುಬಿದಿರೆ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು, ಕೋಶಾಧಿಕಾರಿ ಪ್ರಸನ್ನ ಹೆಗ್ಡೆ, ಹಫೀಝ್ ತೋಡಾರ್, ಅವರ ಪುತ್ರಿ ಹಿಝಾ ಫಾತಿಮಾ ಅವರು ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ಸಂಪಾದಕ ಅಶ್ರಫ್ ವಾಲ್ಪಾಡಿ, ವಿಶೇಷಾಂಕ ಹಾಗೂ ನಮ್ಮಬೆದ್ರ ಪುಟವಿನ್ಯಾಸಗಾರ ಬಾಲರಾಜ್ ನೆಲಗುಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






