ಗುಂಡಿ ಮುಚ್ಚಿದ ಪುರಸಭೆ.*’ನಮ್ಮಬೆದ್ರ’ ವರದಿಗೆ ಶೀಘ್ರ ಸ್ಪಂದನೆ

Picture of Namma Bedra

Namma Bedra

Bureau Report

ಪುರಸಭಾ ವ್ಯಾಪ್ತಿಯ ಕೆಲವು ರಸ್ತೆಗಳ ಹೊಂಡಾಗುಂಡಿಗಳ ಬಗ್ಗೆ ಶುಕ್ರವಾರ ‘ನಮ್ಮ ಬೆದ್ರ’ ಸಚಿತ್ರ ವರದಿ ಮಾಡಿತ್ತು.
ರಸ್ತೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಸಾಮಾಜಿಕ ಕಾರ್ಯಕರ್ತ ಸಂತೋಷ್ ಶೆಟ್ಟಿ ಕೊಡಂಗಲ್ ಅವರು ಎಚ್ಚರಿಸಿದ್ದರು.
ವರದಿ ಪ್ರಕಟಗೊಂಡ ಕೂಡಲೇ ಎಚ್ಚೆತ್ತ ಪುರಸಭೆ ಕೂಡಲೇ ಪೇಟೆಯೊಳಗಿನ ಕೆಲವು ರಸ್ತೆಗಳ ಹೊಂಡಗುಂಡಿಗಳನ್ನು ಸರಿಪಡಿಸುವ ಮೂಲಕ ಸಾರ್ವಜನಿಕ ಸಂಚಾರ ಸುಗಮವಾಗುವಂತೆ ಅನುಕೂಲ ಮಾಡಿಕೊಟ್ಟಿದೆ.


ರಸ್ತೆ ಗುಂಡಿಗಳನ್ನು ಸರಿಪಡಿಸಿದ ಮೂಡುಬಿದಿರೆ ಪುರಸಭೆ ಮತ್ತು ಈ ಬಗ್ಗೆ ವರದಿ ಮೂಲಕ ಗಮನ ಸೆಳೆದ ಸಂತೋಷ್ ಶೆಟ್ಟಿ ಅವರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top