ಕಂದಿರು ಸೋಮನಾಥ ಶಾಂತಿ ಅವರಿಗೆ ಗುರುವಂದನೆ

Picture of Namma Bedra

Namma Bedra

Bureau Report

ಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ಶಿರ್ತಾಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆದ 2024- 25 ನೇ ಸಾಲಿನ ಗುರುವಂದನಾ ಕಾರ್ಯಕ್ರಮದಲ್ಲಿ ಶಿರ್ತಾಡಿ ಸಂಘದ ಕುಲಪುರೋಹಿತರಾದ ಸೋಮನಾಥ ಶಾಂತಿ, ಶ್ರೀ ಕ್ಷೇತ್ರ ಕಂದಿರು ಅವರಿಗೆ ಸಂಘದ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.
ವೈದಿಕ ಸಮಿತಿಯ ಅಧ್ಯಕ್ಷರಾದ ಹರೀಶ್ ಶಾಂತಿ ಪುತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣಿಯೂರು ಶ್ರೀ ಶ್ರೀ ಮಹಾಬಲೇಶ್ವರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಗುರುದೇವ ಸಹಕಾರಿ ಬ್ಯಾಂಕ್ ನ ಸಿ.ಇ.ಒ,ಅಶ್ವಥ್, ಬಿ.ಎಸ್.ಎನ್.ಡಿ.ಪಿ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್,ಮೂಡುಬಿದಿರೆ ಬ್ರಹ್ಮ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಶಿರ್ತಾಡಿ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಅಶೋಕ್ ಕುಮಾರ್ ಮಾಂಟ್ರಾಡಿ, ಕಾಶಿಪಟ್ಣ ಸಂಘದ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ಕಾರ್ಕಳ ಆನೆಕೆರೆ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಅರ್ಚಕರಾದ ಸದಾನಂದ ಶಾಂತಿ, ಬಂಟ್ವಾಳ ನರಿಕೊಂಬು ಕೇಶವ ಶಾಂತಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷರಾದ ಪ್ರದೀಪ್ ಕೋಟ್ಯಾನ್, ಕುಂದಾಪುರ ಎಸಿಎಫ್ ಪ್ರಕಾಶ್ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ಸೋಮನಾಥ ಶಾಂತಿ,ಕಂದಿರು, ಶಿವಾನಂದ ಶಾಂತಿ ತಾಕೊಡೆ,ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ ಅವರಿಗೆ ವೈದಿಕ ಸಮಿತಿ ವತಿಯಿಂದ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮನೋಜ್ ಶಾಂತಿ ಕಾವೂರು ( ನಾಗಪಾತ್ರಿ),ಗಣೇಶ್ ಶಾಂತಿ ಮೂಡುಕೋಡಿ ( ಕಂಬಳ ),ರಾಜೇಶ್ ಶಾಂತಿ ಪುಂಜಾಲಕಟ್ಟೆ ( ಮಂಡಲ ರಚನೆಗಾರರು) ಹಾಗೂ ಕಲಾಕ್ಷೇತ್ರದ ಸಾಧಕ ನವೀನ್ ಶಾಂತಿ ಅಡ್ಯಾರು ಅವರನ್ನು ಅಭಿನಂದಿಸಲಾಯಿತು.
ಬಿಲ್ಲವ ಸಮಾಜದ ಕುಲ ಪುರೋಹಿತರಾದ ಶಾಂತಿಗಳಿಗೆ ವೈದಿಕ ಕ್ಷೇತ್ರದಲ್ಲಿ ಸಂಪೂರ್ಣ ಸಹಕಾರ ನೀಡಿದ ಮರೋಡಿ ಮಡ್ಲಮನೆ ವಾಸು ಪೂಜಾರಿ, ಮೂಡುಮಾರ್ನಾಡು ಹಳೆಮನೆ ನೋಣಯ್ಯ ಪೂಜಾರಿ, ಕುದ್ರಿಪದವು ಬಂಗಾರ್ ಗುಡ್ಡೆ ಮೋಹನ್ ಪೂಜಾರಿ , ತೋಡಾರು ಸದಾನಂದ ಕೆ.ಸುವರ್ಣ ಹಾಗೂ ಜಾರಪ್ಪ ಪೂಜಾರಿ ಅವರ ಪರವಾಗಿ ಅವರ ಪತ್ನಿ ನೀಲಮ್ಮ ಪೂಜಾರ್ತಿ ( ಜೆ.ಎನ್.ಎಸ್. ಕಂದಿರು) ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಇಪ್ಪತ್ತಕ್ಕೂ ಹೆಚ್ಚು ಬಿಲ್ಲವ ಸಂಘದ ವಿವಿಧ ಸಮಿತಿಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೈದಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಶಾಂತಿ ಮಂಗಳೂರು ಅವರು ಸ್ವಾಗತಿಸಿ ಕೋಶಾಧಿಕಾರಿ ಮನೋಜ್ ಶಾಂತಿ ಕಾವೂರು ವಂದಿಸಿದರು.
ಸಮಿತಿಯ ಪದಾಧಿಕಾರಿಗಳಾದ ಸುನಿಲ್ ಶಾಂತಿ, ವಿಕ್ರಮ್ ಶಾಂತಿ, ರೋಹಿತ್ ಶಾಂತಿ, ಜಯರಾಜ್ ಶಾಂತಿ, ಶರತ್ ಶಾಂತಿ, ಪ್ರದೀಪ್ ಶಾಂತಿ, ಕೃಷ್ಣ ಶಾಂತಿ, ಸಂಕೇತ್ ಶಾಂತಿ, ಸುಮಂತ್ ಶಾಂತಿ, ದೀಪಕ್ ಶಾಂತಿ, ರಾಜೇಶ್ ಶಾಂತಿ, ಪ್ರಸಾದ್ ಶಾಂತಿ, ಲವ ಶಾಂತಿ, ಸುಶ್ಮಿತಾ ನಿತೇಶ್ ಹಾಗೂ ಶ್ರೀದೇವಿ ಅವರು ಅಭಿನಂದನಾ ಮತ್ತು ಗುರುವಂದನಾ ಹಾಗೂ ಗೌರವ ಸನ್ಮಾನ ಪತ್ರ ವಾಚಿಸಿ ಸಹಕರಿಸಿದರು.
ಯಕ್ಷಗಾನ, ನಾಟಕ ರಚನೆಗಾರ ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top