ಇದು ಮೂಡುಬಿದಿರೆಯ ಪಟ್ಟಾಡಿ ಸ್ಯಾನಿಟರಿ ಉಂಟಲ್ಲಾ… ಅಲ್ಲೇ ಎದುರಿನ ರಸ್ತೆ ಬದಿಯಲ್ಲಿದೆ.
ಮುತ್ತೂಟ್ ಫೈನಾನ್ಸ್ ನವರು ತಮ್ಮ ಸಂಸ್ಥೆಯ ಜಾಹೀರಾತನ್ನು ‘ ನೋ ಎಂಟ್ರಿ’ ಸೂಚನಾ ಫಲಕದ ನೆಪದಲ್ಲಿ ಹಾಕಿದ್ದಾರೆ.
ಉದ್ದೇಶ ಒಳ್ಳೆಯದು, ಆದರೆ ಇದು ಸ್ವಲ್ಪ ಡೇಂಜರ್ ಪ್ಲೇಸ್ ನಲ್ಲಿದೆ. ನೋ ಎಂಟ್ರಿ ಅಂತ ಸೂಚನಾ ಫಲಕವಿದ್ದರೂ ಅದು ಯಾವ ವಾಹನದವರಿಗೂ ಕಾಣುವುದಿಲ್ಲ.ಕಂಡರೂ ವಾಹನಗಳು ಮಾತ್ರ ಅದೇ ರಸ್ತೆಯಲ್ಲಿ, ನೋ ಎಂಟ್ರಿಯಲ್ಲೇ ಸಾಗುತ್ತದೆ. ಇಲ್ಲಿ ಎರಡೂ ಬದಿಗಳಿಂದಲೂ ವಾಹನ ಸಂಚರಿಸುತ್ತಿದ್ದು ಪರಸ್ಪರ ಎದುರೆದುರಾಗುವ ಸಂದರ್ಭದಲ್ಲಿ ಅಪಾಯಕಾರಿ.

ಅಲ್ಲದೆ ಅಲ್ಲಿನ ರಸ್ತೆಗೆ ಯಾವಾಗ ನೋಡಿದರೂ ಸೌಖ್ಯ ಇರುವುದಿಲ್ಲ.ರಸ್ತೆಯ ಒಂದಿಷ್ಟು ಭಾಗವನ್ನು ಈ ಜಾಹೀರಾತು ಸರ್ಕಲ್ ನುಂಗಿರುವುದರಿಂದ ತಿರುವಿನಲ್ಲಿ ಕೆಲವೊಮ್ಮೆ ಎರಡೂ ಕಡೆಯ ವಾಹನಗಳಿಗೆ ಕಾಣುವುದಿಲ್ಲ.
ಈ ಬಂಗಾರದ ಲೋನಿನ ಜಾಹೀರಾತು ಐಟೆಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಿದರೆ ರಸ್ತೆ ಅಗಲೀಕರಣವಾಗಿ ಅಪಾಯ ತಪ್ಪುತ್ತದೆ.
ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುವುದೊಳ್ಳೆಯದು.






