ಇದನ್ನೊಂದು ಸರಿಮಾಡಿ ಮಾರ್ರೆ…ಪ್ಲೀಸ್ !

Picture of Namma Bedra

Namma Bedra

Bureau Report

ಇದು ಬೆದ್ರ ಬಸ್ ಸ್ಟಾಂಡಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಎದುರಿನ ಮುಗಿಯಂದಿ ಪ್ರಾಬ್ಲೆಮ್. ಕೆಲವು ಸಲ ಇಲ್ಲಿಗೆ ಅಧಿಕಾರಿಗಳು ಬಂದು ನೋಡಿ ಹೋಗಿದ್ದಾರೆ. ಆದರೆ ಟೂ ವೀಲರ್ಸ್ ನವರು ಮಾತ್ರ ಇದು ನಮ್ಮದೇ ಜಾಗ ಅಂತ ಸಿಕ್ಕ ಜಾಗದಲ್ಲಿ ತಮ್ಮ ಗಾಡಿಗಳನ್ನು ಪೊಗ್ಗಿಸಿ ಎದುರಿನ ಗಾಡಿಯವರನ್ನು ಹಿಂದೆ ತೆಗೆಯದಂತೆ, ಜನರಿಗೆ ನಡೆಯಲೂ ಆಗದಂತೆ ಮಾಡಿ ಹೋಗುತ್ತಾರೆ.
ಅದಕ್ಕೆ ಸರಿಯಾಗಿ ಕೆಲವು ಬಸ್ಸುಗಳೂ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಮತ್ತಷ್ಟು ಕಿರಿಕಿರಿ. ಇವರು ಹೀಗೆ ನಿಲ್ಲಿಸಲು ಕಾರಣವೂ ಇದೆ,ಬಸ್ಸುಗಳು ನಿಲ್ಲಬೇಕಾದ ಜಾಗದಲ್ಲಿ ಇತರ ಖಾಸಗಿ ವಾಹನಗಳು ನಿಲ್ಲುತ್ತದೆ.ಕೆಲವೊಮ್ಮೆ ಬಸ್ಸಿನ ಎದುರು, ಹಿಂದೆ ನಿಲ್ಲಿಸಿದ್ದೂ ಇದೆ.ಅಂದರೆ ಎಲ್ಲಿಂದಲೋ ಬರುವವರು ತಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಹೋಗಿ ವಾಪಾಸು ಬರುವವರೆಗೂ ಪಾರ್ಕಿಂಗ್. ಕೆಲವರಂತೂ ಬೆಳಿಗ್ಗೆ ನಿಲ್ಲಿಸಿ ಹೋದರೆ ಮತ್ತೆ ಸಂಜೆ ಕೆಲಸ ಮುಗಿಸಿಕೊಂಡು ಬಂದ ಬಳಿಕವೇ ಕೀ ಹಾಕೋದು.ಹೀಗಾಗಿ ಇಲ್ಲಿ ಖಾಸಗಿ ವಾಹನಗಳದ್ದೇ ಕಾರ್ಬಾರ್. ಇದರಿಂದಾಗಿ ಇಲ್ಲಿನ ವಾಣಿಜ್ಯ ಸಂಕೀರ್ಣದ ಅಂಗಡಿಯವರಿಗೂ ವ್ಯಾಪಾರದ ಸಮಸ್ಯೆ.ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ನಿಂದಾಗಿ ನಡೆಯಲೂ ಆಗದಿದ್ದರೆ ಬ್ಯಾರ ಎಲ್ಲಿಂದ ?
ಪುರಸಭೆಯವರಿಗೆ ಬಾಡಿಗೆ ಕಟ್ಟಬೇಕು, ವ್ಯಾಪಾರ ಇಲ್ಲದಿದ್ದರೆ ತಿಂಗಳಾಗುವಾಗ ಕಟ್ಟೋದು ಎಲ್ಲಿಂದ? ಈ ಸಮಸ್ಯೆಯನ್ನು ಪುರಸಭೆಯವರು ಯಾವಾಗಲೋ ಪರಿಹರಿಸಬೇಕಿತ್ತು.ಪೊಲೀಸರು ಒಂದೆರಡು ಸಲ ಈರೀತಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವವರಿಗೆ ಕೇಸು ಹಾಕಬಹುದು. ಆದರೆ ಇಲ್ಲಿಗೆ ಒಬ್ಬ ಸಿಬ್ಬಂದಿಯನ್ನು ಹಾಕದಿದ್ದರೆ ಈ ಸಮಸ್ಯೆ ಖಂಡಿತಾ ಮುಗಿಯಂದಿ ಕಥೆ.
ಬಸ್ಸು ನಿಲ್ದಾಣದಲ್ಲಿ ಕೇವಲ ಬಸ್ಸುಗಳು ಮಾತ್ರ ನಿಲ್ಲುವಂತಾಗಬೇಕು. ಬೇರೆ ಯಾವ ವಾಹನಗಳಿಗೂ ಇಲ್ಲಿ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪುರಸಭೆ ಮತ್ತು ಪೊಲೀಸರು ಮತ್ತೊಂದು ಸಭೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top