ಅನಾರೋಗ್ಯದಿಂದಾಗಿ ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದ ಮಹಿಳೆಯೋರ್ವರು ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿರ್ತಾಡಿ ದಡ್ಡಾಲ್ಪಲ್ಕೆಯ ಫ್ಲೋರಿನ್ ಡಿಸೋಜ ( 58) ಆತ್ಮಹತ್ಯೆ ಮಾಡಿಕೊಂಡವರು.
ಫ್ಲೋರಿನ್ ಅವರ ಮೂವರು ಮಕ್ಕಳು ವಿದೇಶದಲ್ಲಿದ್ದು ಮನೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಇವರಿಗೆ ಖಾಯಿಲೆಯೊಂದು ಬಾಧಿಸಿದ್ದು ಅದೇ ಚಿಂತೆಯಲ್ಲಿದ್ದರೆನ್ನಲಾಗಿದೆ.ಇಂದು ತಂಗಿ ಶಿರ್ತಾಡಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಡುಬಿದಿರೆ ಅಗ್ನಿಶಾಮಕ ದಳದವರು ಮೃತದೇಹವನ್ನು ಮೇಲಕ್ಕೆತ್ತಿದ್ದು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






