ಒಂಟಿಕಟ್ಟೆಯ ನಿವಾಸಿ, ಆಟೊ ಚಾಲಕ ರಾಜೇಶ್ ( 42) ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ರಾಜೇಶ್ ಅವರು ಕೊಡಂಗಲ್ಲಿನ ಮಹಾವೀರ ಕಾಲೇಜು ಬಳಿಯ ಪಾರ್ಕ್ ನಲ್ಲಿ ಆಟೋಚಾಲಕರಾಗಿ ದುಡಿಯುತ್ತಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಕೌಟುಂಬಿಕ ಸಮಸ್ಯೆ ಕಾರಣವೆನ್ನಲಾಗುತ್ತಿದೆ.










