ಬೆದ್ರ ಬಸ್ಸ್ಟಾಂಡ್ ಪಾರ್ಕಿಂಗ್ ಪ್ರಾಬ್ಲೆಮ್ ಒಂದು ವಾರದೊಳಗೆ ಕ್ಲೀಯರ್

Picture of Namma Bedra

Namma Bedra

Bureau Report

ಬೆದ್ರ ಬಸ್ ಸ್ಟಾಂಡಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದೆದುರಿನ ಪಾರ್ಕಿಂಗ್ ಸಮಸ್ಯೆ ಇನ್ನೊಂದು ವಾರದೊಳಗೆ ಕ್ಲಿಯರ್ ಆಗಲಿದೆ.ಟೂ ವೀಲರ್ಸ್, ಫೋರ್ ವೀಲರ್ಸ್ ಪಾರ್ಕಿಂಗ್ ಸಮಸ್ಯೆಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಇಂದು ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಪುರಸಭೆ,ಪೊಲೀಸ್ ಇನ್ಸ್ಪೆಕ್ಟರ್, ಬಸ್ಸು ಮಾಲಕರ ಸಂಘ ಮತ್ತು ಈ ಸಂಕೀರ್ಣದ ವ್ಯಾಪಾರಸ್ಥರ ನಡುವಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ದಿನಂಪ್ರತಿ ಈ ಸಂಕೀರ್ಣದ ಎದುರು ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದಾಗಿ ಸಮಸ್ಯೆಯಾಗಿ ವ್ಯಾಪಾರಸ್ಥರಿಗೂ ಸಮಸ್ಯೆಯಾಗಿತ್ತು.ಈ ಹಿಂದೆ ಹಲವು ಬಾರಿ ಸಭೆ ನಡೆದಿತ್ತಾದರೂ ಅದು ಪರಿಣಾಮಕಾರಿಯಾಗಿರಲಿಲ್ಲ.
ಈ ಬಗ್ಗೆ ‘ ನಮ್ಮ ಬೆದ್ರ’ ನಿನ್ನೆ ಸಚಿತ್ರ ವರದಿ ಪ್ರಕಟಿಸಿತ್ತು.
“ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ವ್ಯಾಪಾರಸ್ಥರು ಮತ್ತು ಗ್ರಾಹಕರ ಟೂ ವೀಲರ್ಸ್ ಗಳನ್ನು ಒಂದು ಸಾಲಿನಲ್ಲಿ ಮಾತ್ರ ನಿಲ್ಲಿಸಲು ಅವಕಾಶ, ಉಳಿದವರ ದ್ವಿಚಕ್ರ ವಾಹನಗಳನ್ನು ಶೌಚಾಲಯದ ಬಳಿ ಮತ್ತು ಇತ್ತೀಚೆಗೆ ವ್ಯವಸ್ಥೆ ಮಾಡಿರುವ ಜಾಗದಲ್ಲಿ ನಿಲ್ಲಿಸಬೇಕು, ಅದು ತಪ್ಪಿದರೆ ದಂಡ ವಿಧಿಸಲಾಗುತ್ತದೆ, ನಾಲ್ಕು ಚಕ್ರಗಳ ವಾಹನಗಳನ್ನು ಬಸ್ ಸ್ಟಾಂಡಿನ ಇನ್ನೊಂದು ಬದಿಯಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಿ ಕೊಡಲಾಗುವುದು, ಉಳಿದಂತೆ ಬಸ್ಸುಗಳ ನಿಲುಗಡೆಗೆ ಮಾರ್ಕಿಂಗ್ ಮಾಡಿ ಬ್ಯಾರಿಕೇಡ್ ಹಾಕಲಾಗುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ.


ಯಾರೂ ಕೂಡಾ ತಮ್ಮ ಅಂಗಡಿಯೆದುರು, ಕಟ್ಟಡದೆದುರು ವಾಹನ ನಿಲ್ಲಿಸಬೇಡಿ ಎಂದು ಹೇಳುವಂತಿಲ್ಲ, ಪುರಸಭೆ ಡಾಮಾರು ಹಾಕಿ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಹಾಗೆ ಹೇಳಲು ಯಾರಿಗೂ ಅಧಿಕಾರವಿಲ್ಲ ಎಂದು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಹೇಳಿದರು.
ಪುರಸಭೆಯವರು ಮಾಡಿ ಕೊಡಬೇಕಾದ ಕೆಲಸವನ್ನು ಬೇಗನೇ ಮಾಡಿಕೊಡಿ,ಉಳಿದ ಕೆಲಸವನ್ನು ನಾವು ಮಾಡುತ್ತೇವೆ ಎಂದೂ ಅವರು ಹೇಳಿದರು.
ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರು ” ಈ ಎಲ್ಲಾ ಸಮಸ್ಯೆಗಳಿಗೂ ಒಂದು ವಾರದೊಳಗೆ ಪರಿಹಾರ ಸಿಗಲಿದೆ” ಎಂದರು.
ಮುಖ್ಯಾಧಿಕಾರಿ ಇಂದು ಎಂ.ಅವರು ಇಲ್ಲಿನ ಸಮಸ್ಯೆಗಳು ಮತ್ತು ವ್ಯಾಪಾರಸ್ಥರ ಅಭಿಪ್ರಾಯ ಪಡಕೊಂಡರು.
ಬಸ್ಸು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪಿ.ಎಂ, ಬಸ್ಸು ಮಾಲಕ ಸತೀಶ್ ಅಮೀನ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ,ವಾಣಿಜ್ಯ ಸಂಕೀರ್ಣದ ಶೇಖರ್ ಬೊಳ್ಳಿ, ಪ್ರದೀಪ್ ರಾವ್, ಸಂತೋಷ್ ಶೆಟ್ಟಿ, ನಾಗೇಶ್ ಬಂಗೇರ,ನವೀನ್ ಹೆಗ್ಡೆ,ಪತ್ರಕರ್ತರಾದ ಯಶೋಧರ ಬಂಗೇರ, ಪ್ರಸನ್ನ ಹೆಗ್ಡೆ ಮತ್ತಿತರರು ಸಲಹೆಗಳನ್ನು ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top