ಹೊರರಾಜ್ಯಗಳಿಗೆ ಬಾಕ್ಸೈಟ್ ಅಥವಾ ಕೆಂಪು ಮಣ್ಣು ಸಾಗಿಸುವ ಬೃಹತ್ ಗಾತ್ರದ ಬಹುಚಕ್ರಗಳ ಲಾರಿಗಳ ನಿರಂತರ ಓಡಾಟದಿಂದ ಈ ಭಾಗದ ರಸ್ತೆಗಳೆಲ್ಲಾ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ,ಲೋಕೋಪಯೋಗಿ ಇಲಾಖೆಯ ಗುಡ್ಡೆಯಂಗಡಿ ಸೇತುವೆ ಕೂಡಾ ಶಿಥಿಲಗೊಂಡಿದೆ ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜೇಶ್ ಕಡಲಕೆರೆ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇಂದು ಮೂಡುಬಿದಿರೆಯಲ್ಲಿ ನಡೆದ ಲೋಕಾಯುಕ್ತ ಅದಾಲತ್ ನಲ್ಲಿ ಈ ದೂರನ್ನು ನೀಡಲಾಯಿತು.


ಬಾಕ್ಸೈಟ್, ಕೆಂಪುಮಣ್ಣು ಸಾಗಿಸುವ ಬೃಹತ್ ಗಾತ್ರದ ಲಾರಿಗಳಿಂದಾಗಿ ಪುತ್ತಿಗೆ, ಪಾಲಡ್ಕ ಹಾಗೂ ಮೂಡುಬಿದಿರೆ ಪರಿಸರದ ರಸ್ತೆಗಳು ಸಂಪೂರ್ಣ ಕೆಟ್ಟುಹೋಗಿದೆ,ಗುಡ್ಡೆಯಂಗಡಿಯ ಸೇತುವೆಯೂ ಅಪಾಯದಂಚಿನಲ್ಲಿದೆ ,ಈ ಲಾರಿಗಳ ನಿರಂತರ ಸಂಚಾರದಿಂದಲೇ ರಸ್ತೆಗಳು ಕೆಟ್ಟುಹೋಗಲು ಕಾರಣವಾಗಿದ್ದು ಈ ವಾಹನಗಳಿಗೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧಿಸಿ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಲೋಕಾಯುಕ್ತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.






