ಈಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಕಯ್ಯ ಪೂಜಾರಿ (ಸಮಾಜ ಸೇವೆ), ಗೋಪಾಲ ಕೋಟ್ಯಾನ್ ( ದೈವಾರಾಧನೆ) ಮತ್ತು ಕೃಷಿ ಸಾಧಕ ಸಂತೋಷ್ ಶೆಟ್ಟಿ ಕಡಂದಲೆ ಅವರಿಗೆ ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ನೆಲ್ಲಿಕಾರು ಹರೀಶ್ ಆಚಾರ್ಯ, ಸುಕುಮಾರ್ ಜೈನ್ ಅಳಿಯೂರು, ಪ್ರದೀಪ್ ಪಣಪಿಲ ಮತ್ತಿತರರು ಈ ಸಂದರ್ಭದಲ್ಲಿದ್ದರು.






