ಕಣ್ಣು ಕಾಣದಿದ್ದರೂ ಊರುಗೋಲಿನ ಕೃಷಿಕರಾಗಿದ್ದ ಜಾರಪ್ಪ ಪೂಜಾರಿ ಇನ್ನಿಲ್ಲ!

Picture of Namma Bedra

Namma Bedra

Bureau Report

ತನ್ನೆರಡು ಕಣ್ಣುಗಳು ಕಾಣದಿದ್ದರೂ ಊರುಗೋಲಿನ ಸಹಾಯದಿಂದ ಕೃಷಿ ಚಟುವಟಿಕೆ ಮಾಡಿ ಉತ್ತಮ ಫಸಲನ್ನು ಪಡೆಯುತ್ತಿದ್ದ ಅತ್ಯುತ್ತಮ ಕೃಷಿಕ, ಶಿರ್ತಾಡಿ ಕಂದಿರು ಮನೆಯ ಜಾರಪ್ಪ ಪೂಜಾರಿ ( 69) ಅವರು ಶನಿವಾರ ನಿಧನಾಗಿದ್ದಾರೆ.
ಕಂದಿರುವಿನ ಜೆ.ಎನ್.ಎಸ್.ಕನ್ಸ್ಟ್ರಕ್ಷನ್ಸ್ ನ ಸುರೇಂದ್ರ ಕೆ.ಅವರ ತಂದೆಯಾಗಿರುವ ಅವರು ತನ್ನ ಕೃಷಿಗಾಗಿ ಹಲವು ಕಡೆ ಸನ್ಮಾನಗೊಂಡಿದ್ದರು.
ದೃಷ್ಟಿದೋಷವಿದ್ದರೂ ತನ್ನ ಇಷ್ಟದ ಕೃಷಿ ಚಟುವಟಿಕೆಯನ್ನು ಬಿಡದ ಅವರು ಇತ್ತೀಚಿನವರೆಗೂ ಊರುಗೋಲಿನ ಸಹಾಯದಿಂದ ಗದ್ದೆ, ತೋಟಕ್ಕೆ ಹೋಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು.
ಮೃತರು ಪತ್ನಿ, ಪುತ್ರ ಸುರೇಂದ್ರ ಕೆ, ಪುತ್ರಿಯರು, ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top