ಪಡುಮಾರ್ನಾಡು: ಎರಡು ವಾರಗಳ ಅಂತರದಲ್ಲಿ ಮೂರು ಯುವ ಜೀವಗಳು ಬಲಿ !

Picture of Namma Bedra

Namma Bedra

Bureau Report

ಪಡುಮಾರ್ನಾಡು ಪರಿಸರದಲ್ಲಿ ಕಳೆದ ಎರಡು ವಾರಗಳ ಅಂತರದಲ್ಲಿ ಮೂವರು ಯುವಕರು ಬೇರೆ ಬೇರೆ ಪ್ರಕರಣಗಳಲ್ಲಿ ಮೃತಪಟ್ಟಿದ್ದು ಗ್ರಾಮಸ್ಥರಲ್ಲಿ ದಿಗ್ಭ್ರಮೆ ಮೂಡಿಸಿದೆ.
ಮೊಡಂದೇಲ್ ಎಂಬಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ ಎಂಬ ಯುವಕ ಆವರಣಗೋಡೆ ಇಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದ.
ಅದಾದ ಬಳಿಕ ಸುಭಾಷ್ ಎಂಬ ಯುವಕ ರಕ್ತದೊತ್ತಡ ಸಮಸ್ಯೆಯಿಂದ ಮೃತಪಟ್ಟಿದ್ದ.


ಈ ಎರಡು ಘಟನೆಗಳು ನಡೆದ ಕೆಲವೇ ದಿನಗಳ ಅಂತರದಲ್ಲಿ ಅಂದರೆ ಶುಕ್ರವಾರ ಬೆಳಿಗ್ಗೆ ಪಡುಮಾರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮೂರೂ ದುರ್ಮರಣಗಳು ಅದರಲ್ಲೂ ಯುವ ಜೀವಗಳೇ ಬಲಿಯಾಗಿರುವುದು ಪಡುಮಾರ್ನಾಡು ಸುತ್ತಮುತ್ತದ ಜನರಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top