ಮಹಾವೀರ ಕಾಲೇಜಿನಲ್ಲಿ ‘ಮಹಾವಿತ್’ ಕಾರ್ಯಕ್ರಮ

Picture of Namma Bedra

Namma Bedra

Bureau Report

60 ನೇ ವರ್ಷದ ಸಂಭ್ರಮದಲ್ಲಿರುವ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಕಲಾ ವಿಭಾಗದ ವತಿಯಿಂದ ನಡೆದ ‘ ಮಹಾವಿತ್ ‘ – ಪಿಯುಸಿ ಮಟ್ಟದ ಕಲಾ ಸ್ಪರ್ಧೆಯನ್ನು ರಂಗನಟ, ಕಲಾ ಪೋಷಕ, ಕಲ್ಲಬೆಟ್ಟು ವ್ಯ.ಸೇ.ಸ.ಬ್ಯಾಂಕ್ ನ ಮಾಜಿ ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.


ಕಾಲೇಜಿನ ಟ್ರಸ್ಟಿ ಜಯಪ್ರಕಾಶ್ ಪಡಿವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ಞಾ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ, ಪ್ರೊ.ಹರೀಶ್, ಪಿ ಯು ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ,ಕಾರ್ಯಕ್ರಮ ಸಂಯೋಜಕಿ ಗೀತಾ,ಕಲಾ ವಿಭಾಗದ ಅಧ್ಯಕ್ಷೆ ಸಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಮುಹಮ್ಮದ್ ಜುನೈದ್,ಕಾರ್ಯದರ್ಶಿ ಸಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top