ಸುಮಾರು 350 ರಷ್ಟು ನಾಗರಹಾವುಗಳನ್ನು ಬರಿಗೈಯಲ್ಲಿ ಹಿಡಿದು ಅವುಗಳನ್ನು ರಕ್ಷಿತಾರಣ್ಯಕ್ಕೆ ಬಿಡುತ್ತಿರುವ ಆಪತ್ಬಾಂಧವ, ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು ಅವರನ್ನು ಅಡ್ಡೂರಿನ ಗರೋಡಿಮನೆ ಅಂಗಳದಲ್ಲಿ ನಡೆದ ‘ ನಿಲಾವುರೊ ಬೆಲ್ಕಿರ್ಲ್ ಒರುಕೂಟ’ ಎಂಬ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬ್ಯಾರಿ ಕಲಾರಂಗ ಮೈಕಾಲ ಇದರ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಎಪ್ಪತ್ತು ವರ್ಷ ಮೇಲ್ಪಟ್ಟ ಹಿರಿಯರನ್ನು ಗೌರವಿಸಲಾಯಿತು. ಪೂರ್ವಜರ ಕಾಲದ ನೆನಪುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ಬ್ಯಾರಿ ಕಲಾರಂಗ ಮೈಕಾಲ ಇದರ ಅಧ್ಯಕ್ಷರಾದ ಅಝೀಝ್ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಎಂ.ಎಚ್.ಹಾಜಿ ಅವರು ಉದ್ಘಾಟಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಎಚ್.ಉಮರ್,ಜಿ.ಪಂ.ಮಾಜಿ ಸದಸ್ಯ ಯು.ಪಿ.ಇಬ್ರಾಹಿಂ, ಡಾ.ಸಿದ್ದೀಕ್ ಅಡ್ಡೂರು, ಮುಹಮ್ಮದಾಲಿ ಕಮ್ಮರಡಿ,ಅಖಿಲ ಭಾರತ ಬ್ಯಾರಿ ಮಹಾಸಭಾ ಸಂಚಾಲಕ ಶಾಕಿರ್ ಹಾಜಿ,ಬ್ಯಾರಿ ವಾರ್ತೆ ಸಂಪಾದಕ ಬಶೀರ್ ಬೈಕಂಪಾಡಿ,ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅಬ್ದುಲ್ ರಹ್ಮಾನ್ ಕೋಡಿಜಾಲ್,ಮೇಲ್ತೆನೆ ಗೌರವಾಧ್ಯಕ್ಷ ಆಲಿ ಕುಂಞಿ ಪಾರೆ,ಅಡ್ಡೂರು ಮಸೀದಿ ಕಮಿಟಿ ಅಧ್ಯಕ್ಷ ಅಹ್ಮದ್ ಬಾವಾ ಅಂಗಡಿಮನೆ,ಉಪಾಧ್ಯಕ್ಷ ಎ.ಕೆ.ಅಶ್ರಫ್, ಗಲ್ಫ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್, ಗುರುಪುರ ಗ್ರಾ.ಪಂ.ಸದಸ್ಯ ದಿಲ್ಯಾದ್ ಅಶ್ರಫ್, ಮುಹಮ್ಮದ್ ಮನ್ಸೂರ್, ಮುಹಮ್ಮದ್ ಅಶ್ರಫ್, ಬ್ಯಾರಿ ಕಲಾರಂಗ ಮೈಕಾಲ ಪದಾಧಿಕಾರಿಗಳಾದ ಬಾವಾ ಪದರಂಗಿ,ಹಾರಿಸ್ ತೋಡಾರ್, ಸಾಹುಲ್ ಹಮೀದ್ ಗುರುಪುರ, ಅಬ್ದುಲ್ ಜಬ್ಬಾರ್ ಅಡ್ಡೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಜಬ್ಬಾರ್ ಮಲ್ಲೂರು ಸ್ವಾಗತಿಸಿ ಹಾರಿಸ್ ತೋಡಾರ್ ವಂದಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ಜಿಲ್ಲೆಯ ಖ್ಯಾತ ಹಾಡುಗಾರರಿಂದ ಬ್ಯಾರಿ ಹಾಡುಗಳು, ಬ್ಯಾರಿ ಕಥಾ ಪ್ರಸಂಗ ನಡೆಯಿತು .






