ಹೆಸರು ವಸಂತ.ಮಾಂಟ್ರಾಡಿ ಗ್ರಾಮದ ಪೆಂಚಾರು ಜನತಾ ಕಾಲನಿ ನಿವಾಸಿ. ಸುತ್ತಮುತ್ತ ಪರಿಸರದಲ್ಲಿ ‘ಸ್ನೇಕ್ ಮಾಸ್ಟರ್ ವಸಂತ ‘ ಎಂದೇ ಫೇಮಸ್ಸಾಗಿ ಆ ಪರಿಸರದ ಜನತೆಗೆ ಆಪತ್ಬಾಂಧವರಾಗಿದ್ದಾರೆ.
ಅಡಿಕೆ ಸುಲಿಯುವ ವೃತ್ತಿಯೊಂದಿಗೆ ಜೀವನ ಸಾಗಿಸುತ್ತಿರುವ ವಸಂತ ಅವರು ‘ಉಚ್ಚು ಬೈದ್ಂಡ್, ಬರೊಲಿಯ’ ಅಂತ ಅದೆಷ್ಟು ರಾತ್ರಿ-ಹಹಲು ಕಾಲ್ ಮಾಡಿದರೂ ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಲ್ಲಿಗೆ ಧಾವಿಸಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ.ಯಾವತ್ತೂ ಹಣಕ್ಕಾಗಿ ಡಿಮಾಂಡ್ ಮಾಡಿದವರಲ್ಲ.

ವಿಷಪೂರಿತ- ವಿಷರಹಿತ ಹಾವುಗಳನ್ನು ಹಿಡಿದು ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗರೂಕತೆಯಿಂದ ಸುರಕ್ಷಿತ ಜಾಗಕ್ಕೆ ಬಿಡುವುದು ಕೂಡಾ ಇವರ ಒಂದು ರೀತಿಯ ಸೇವೆ.


ಈವರೆಗೆ ಸುಮಾರು 195 ರಷ್ಟು ನಾಗರಹಾವುಗಳು, 2 ಕಾಳಿಂಗ ಸರ್ಪ,46 ಕನ್ನಡಿಹಾವುಗಳು,63 ಕಟ್ಟು ಹಾವು (ಕಟ್ಟ ಬೊಳಕರಿ),15 ಕಟ್ಟ ಕಡಂಬಲ, 3 ಕುರುಡು ಕಂದಡಿ, 46 ಹೆಬ್ಬಾವುಗಳು, 7 ಕೇರೆ ಹಾವುಗಳು, 8 ಪಗೆಲ ( ಬಿಸಿಲಹಾವು),1 ನೀರಾವು ( ಒಲ್ಲೆ), 3 ಎಲೆಮಡಲ ಹಾಗೂ ಹೆಸರು ಗೊತ್ತಿಲ್ಲದ ಕೆಲವು ವಿಶೇಷ ಹಾವುಗಳನ್ನು ಹಿಡಿದು ಸೈ ಎನಿಸಿದ್ದಾರೆ.
ಮಾಂಟ್ರಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಪ್ರಚಾರ ಪಡೆಯದೆ ತನ್ನ ಈ ಸೇವೆಯನ್ನು ಮಾಡುತ್ತಿರುವ ವಸಂತ ಅವರನ್ನು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಬೇಕು.ಮಾಂಟ್ರಾಡಿ ಪರಿಸರದಲ್ಲಿ ಆಪತ್ಬಾಂಧವನಾಗಿರುವ ವಸಂತ ಅವರ ಈ ಸೇವೆ ನಿಜಕ್ಕೂ ಅಪರೂಪದ್ದು ಮತ್ತು ಅಪಾಯದ್ದು.
ಅವರಿಗೆ ಯಶಸ್ಸಾಗಲಿ, ಯಾವುದೇ ಅಪಾಯ ಸಂಭವಿಸದಿರಲಿ ಎಂಬ ಹಾರೈಕೆ ನಮ್ಮದು.
9741471934,7259797058
(ಇದು ಅವರ ಮೊಬೈಲ್ ನಂಬರ್)






