ಪಣಪಿಲದಲ್ಲಿ ನಡೆದ ಜಿಲ್ಲೆಯ ಉಭಯ ಜಿಲ್ಲೆಯ ಮೊದಲ ಕಂಬಳದ ಫಲಿತಾಂಶ ತಡರಾತ್ರಿ ಪ್ರಕಟಗೊಂಡಿದೆ.ಅದರೊಟ್ಟಿಗೆ ಅಲ್ಲಿನ ವ್ಯವಸ್ಥೆಯ ಒಟ್ಟು ರಿಸಲ್ಟ್ ಕೂಡಾ ‘ ಬೆಸ್ಟ್’ ಎಂದು ಕಂಬಳಾಭಿಮಾನಿಗಳಿಂದ ಪ್ರಕಟವಾಗಿದೆ.
ಕಂಬಳ ಸಮಿತಿಯ ಪದಾಧಿಕಾರಿಗಳ ಅವಿರತ ಶ್ರಮದ ಫಲವಾಗಿ ಪಣಪಿಲ ಕಂಬಳವು ಯಶಸ್ವಿಯಾಗಿ ಮುಕ್ತಾಯಗೊಂಡು ಆಯೋಜನೆಯಲ್ಲಿ ಸೈ ಎನಿಸಿಕೊಂಡಿದೆ.
ಕಂಬಳ ಕರೆ, ವಾಹನ ನಿಲುಗಡೆಗಾಗಿ ಮಾಡಿರುವ ಪಾರ್ಕಿಂಗ್ ವ್ಯವಸ್ಥೆ, ಜನರು ಬಂದು ಹೋಗಲು ಮಾಡಿರುವ ವ್ಯವಸ್ಥೆ, ಸ್ವಯಂ ಸೇವಕರ ಶ್ರಮ ..ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಪಣಪಿಲ ಕಂಬಳವನ್ನು ಯಶಸ್ಸಿನ ದಡ ಸೇರಿಸಿದೆ.
ಯುವರಾಜ್ ಜೈನ್ ಅವರ ಸಮರ್ಥ ಸಾರಥ್ಯದಲ್ಲಿ ಅಶ್ವಥ್ ಪಣಪಿಲ ಎಂಬ ಸಂಘಟನಾ ಚತುರನ ಐಡಿಯಾಗಳು, ಸಮಿತಿಯ ಪದಾಧಿಕಾರಿಗಳಾಗಿ ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಯಶಸ್ಸಿನ ಹಿಂದಿನ ಪಾತ್ರಧಾರಿಗಳಾದ ಸುಭಾಶ್ಚಂದ್ರ ಚೌಟ, ಮುನಿರಾಜ್ ಹೆಗ್ಡೆ, ರಮಾನಾಥ ಸಾಲ್ಯಾನ್, ದೀಕ್ಷಿತ್ ಪಣಪಿಲ, ಜಯಚಂದ್ರ ಹಾಗೂ ಇತರ ಪದಾಧಿಕಾರಿಗಳು, ಸಮಿತಿ ಸದಸ್ಯರ ತಿಂಗಳ ಹಿಂದಿನ ಶ್ರಮವೂ ಈ ಯಶಸ್ಸಿಗೆ ಕಾರಣವಾಗಿದೆ.
ಮೊದಲ ಕಂಬಳ ಎಂಬ ನೆಲೆಯಲ್ಲಿ ದೂರದೂರದಿಂದ ದೊಡ್ಡ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಚಳಿ ಮರೆತು ಭಾಗವಹಿಸಿದ್ದು, ವಿಶೇಷವಾಗಿ ಮಹಿಳೆಯರು ಕೂಡಾ ಈ ಗ್ರಾಮೀಣ ಪ್ರದೇಶದಲ್ಲಿ ನಡದ ತುಳುನಾಡ ಜನಪದ ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿರುವುದು ಕೂಡಾ ಬೆಸ್ಟ್ ರಿಸಲ್ಟ್ ಗೆ ಕಾರಣವಾಗಿದೆ.ಇಲ್ಲಿ ಯಾವ ರಾಜಕೀಯವೂ ಮೇಲಾಗಲಿಲ್ಲ,ಕೀಳಾಗಲಿಲ್ಲ.ಎಲ್ಲ ಪಕ್ಷದ ಪ್ರಮುಖರೂ ಭಾಗವಹಿಸಿ ಯಶಸ್ಸು ಹಾರೈಸಿ ಹೋಗಿದ್ದಾರೆ.
ಫಲಿತಾಂಶ:
ಭಾಗವಹಿಸಿದ್ದ ಒಟ್ಟು ಕೋಣಗಳ ಸಂಖ್ಯೆ: 102
ನೇಗಿಲು ಹಿರಿಯ:
ಪ್ರಥಮ ಹಾಗೂ ದ್ವಿತೀಯ: ಕೌಡೂರುಬೀಡು ತುಷಾರ್ ಮಾರಪ್ಪ ಭಂಡಾರಿ A & B
( ಓಡಿಸಿದವರು: ಭಟ್ಕಳ ಶಂಕರ & ಉಜಿರೆ ಸ್ಪಂದನ್ ಶೆಟ್ಟಿ)
ನೇಗಿಲು ಕಿರಿಯ:
ಪ್ರಥಮ: ಮೂಲ್ಕಿ ಚಿತ್ರಾಪು ಸಾನದ ಮನೆ ಅಂಬಿಕಾ ರವೀಂದ್ರ ಪೂಜಾರಿ
ದ್ವಿತೀಯ: ಪಣಪಿಲ ಫ್ರೆಂಡ್ಸ್ ಯುವ ಬಾಂಧವರು.
( ಓಡಿಸಿದವರು: ಬಾರಾಡಿ ಸತೀಶ್ ಸಪಳಿಗ & ಇಳಿಯೂರು ದಿನೇಶ್ ಪೂಜಾರಿ)
ಹಗ್ಗ ಕಿರಿಯ:
ಪ್ರಥಮ: ಮೂಡಾರ್ ಹಚ್ಚೊಟ್ಟು ಫ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಶೆಟ್ಟಿ.
( ಓಡಿಸಿದವರು: ಬೈಂದೂರು ವಿವೇಕ್ ಪೂಜಾರ್ & ಮಂಗಲ್ಪಾಡಿ ರಕ್ಷಿತ್ ಶೆಟ್ಟಿ)
ನೇಗಿಲು ಹಿರಿಯ- 13 ಜತೆ, ನೇಗಿಲು ಕಿರಿಯ: 70 ಜತೆ, ಹಗ್ಗ ಕಿರಿಯ ;19 ಜತೆ






