ಅವಧಿ ಮುಗಿಸಿದ ರಾಜ್ಯದ ಕೆಲವು ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆಗೆ ದಿನ ನಿಗದಿಪಡಿಸಿ ಆದೇಶ ಹೊರಬಿದ್ದಿದೆ.
ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಡಿ.21 ರಂದು ಚುನಾವಣೆ ನಡೆಯಲಿದೆ .
ಬಜಪೆ ಪಟ್ಟಣ ಪಂಚಾಯತ್ ನ 19 ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ 18 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇದೀಗ ಪಟ್ಟಣ ಪಂಚಾಯತ್ ಚುನಾವಣಾ ದಿನ ಮಾತ್ರ ನಿಗದಿಯಾಗಿದ್ದು ಶೀಘ್ರದಲ್ಲೇ ಪುರಸಭಾ ಚುನಾವಣಾ ದಿನ ಪ್ರಕಟವಾಗಲಿದೆಯೆಂದು ತಿಳಿದು ಬಂದಿದೆ.
ಮೂಡುಬಿದಿರೆ ಸಹಿತ ರಾಜ್ಯದ ಪುರಸಭಾಡಳಿತಕ್ಕೆ ಶೀಘ್ರ ಚುನಾವಣೆ ನಡೆಯುವ ನಿರೀಕ್ಷೆಯಿದ್ದು ಚುನಾವಣಾ ಆಕಾಂಕ್ಷಿಗಳು ಈಗಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ.











