ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ನಡೆದ ವಾಲ್ಪಾಡಿ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಈ ಬೆಳವಣಿಗೆ ನಡೆಯಿತು.
ಅತಿಥಿ ಗಣ್ಯರು ಉಪಸ್ಥಿತರಿದ್ದ ಈ ವೇದಿಕೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಫ್ರೆಂಡ್ಸ್ ವಾಲ್ಪಾಡಿ ಮತ್ತು ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಅವರು ‘ ಸ್ವರಾಜ್ಯ ಮೈದಾನದಲ್ಲೊಂದು ವೇದಿಕೆ ಮತ್ತು ಶೌಚಾಲಯ ಬೇಕೆನ್ನುವುದು ನಮ್ಮ ಬಹುಕಾಲದ ಬೇಡಿಕೆಯಾಗಿದೆ, ನಮ್ಮದೇ ಖರ್ಚಲ್ಲಿ ನಿರ್ಮಿಸಲು ನಾವು ತಯಾರಿದ್ದೇವೆ,ಪಕ್ಷಬೇಧ ಮಾಡದೆ ನಮಗೆ ಅನುಮತಿ ದೊರಕಿಸಿ ಕೊಡಿ’ ಎಂದು ಬೇಡಿಕೆ ಇಟ್ಟರು.
ಅತಿಥಿಯಾಗಿ ಭಾಗವಹಿಸಿದ್ದ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಅವರು ಆ ಕೂಡಲೇ ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರದೀಪ್ ಅವರನ್ನು ಸಂಪರ್ಕಿಸಿ ನಮ್ಮ ಬೇಡಿಕೆಯನ್ನು ಅವರ ಮುಂದಿಟ್ಟರು.
ಅಲ್ಲದೆ ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಸುದರ್ಶನ ಎಂ.ಅವರಿಗೂ ಸಂಪರ್ಕ ನೀಡಿದರು. ಸುದರ್ಶನ ಅವರು ಕೂಡಾ ಈ ಬೇಡಿಕೆಯನ್ನು ಕ್ರೀಡಾ ಇಲಾಖಾಧಿಕಾರಿಯವರ ಮುಂದಿಟ್ಟರು.
ಪ್ರದೀಪ್ ಅವರು ‘ ಮನವಿ ನೀಡಲಿ, ಸಂಬಂಧಪಟ್ಟವರಲ್ಲಿ ಈಬಗ್ಗೆ ಚರ್ಚಿಸಿ ಮುಂದಕ್ಕೆ ಹೇಳುತ್ತೇವೆ’ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಸಹಿತ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಕಡಲಕೆರೆ ಮತ್ತು ಸುದರ್ಶನ ಎಂ.ಅವರ ಈ ಸ್ಪಂದನೆಗೆ ಬೆದ್ರ ಕ್ರಿಕೆಟ್ ಯೂನಿಯನ್ ಕೃತಜ್ಞತೆ ಸಲ್ಲಿಸಿದೆ.











