ಶಿರ್ತಾಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಶಿರ್ತಾಡಿ ಟ್ರೇಡ್ ಸೆಂಟರ್ ನಲ್ಲಿ ಸೋಮವಾರ ಬೆಳಿಗ್ಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ಗಣರಾಜ್ಯೋತ್ಸವದ ಶುಭದಿನದಂದೇ ಕಚೇರಿ ಉದ್ಘಾಟನೆಗೊಂಡಿದೆ, ಮುಂದಿನ ವರ್ಷದ ಗಣರಾಜ್ಯೋತ್ಸವ ದಿನದಂದು ಸ್ವಂತ ಕಚೇರಿಯ ಶಂಕುಸ್ಥಾಪನೆ ನೆರವೇರಲಿ ಎಂದು ಹಾರೈಸಿ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಹತ್ತು ಲಕ್ಷ ರೂ.ನೀಡುವುದಾಗಿ’ ಘೋಷಿಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ಎಸ್.ಕೋಟ್ಯಾನ್, ಎಂ.ಬಾಹುಬಲಿ ಪ್ರಸಾದ್, ಎಕ್ಸಲೆಂಟ್ ಯುವರಾಜ ಜೈನ್, ಎಸ್.ಡಿ.ಸಂಪತ್ ಸಾಮ್ರಾಜ್ಯ, ಸತೀಶ್ ಕೆ.ಕಾಶಿಪಟ್ಣ,ವಸಂತ ಬೆರ್ನಾರ್ಡ್, ಸತೀಶ್ ವಿ.ಶೆಟ್ಟಿ, ಸಂತೋಷ್ ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಎಸ್.ಪ್ರವೀಣ್ ಕುಮಾರ್, ಕಟ್ಟಡ ಮಾಲಕ ಹಸನಬ್ಬ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಚಿಂತನ್ ಲೋಬೋ ಸ್ವಾಗತಿಸಿ, ನಿರ್ದೇಶಕಿ ಆಗ್ನೆಸ್ ಡಿಸೋಜ ವಂದಿಸಿದರು .ರಾಮ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.










