ಹಿಂದೂ ಸಂಗಮ ಆಯೋಜನಾ ಸಮಿತಿ ಮೂಡುಬಿದಿರೆ ತಾಲೂಕು ಶಿರ್ತಾಡಿ ಮಂಡಲ ವತಿಯಿಂದ ನಡೆದ ಹಿಂದೂ ಸಂಗಮದ ವೈಭವದ ಶೋಭಾಯಾತ್ರೆಯಲ್ಲಿ ದೊಡ್ಡ ಗಾತ್ರದ ‘ ಹನುಮಂತ’ ವೇಷಧಾರಿ ಸರ್ವರ ಗಮನಸೆಳೆದಿದ್ದಾರೆ.


ಶಿರ್ತಾಡಿಯಿಂದ ಅರ್ಜುನಾಪುರ ದೇವಸ್ಥಾನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ಹನುಮಂತ ವೇಷಧಾರಿ ಸಹಿತ ಕುಣಿತ ಭಜನಾ ತಂಡಗಳು, ಗೊಂಬೆ ಬಳಗ ಹಾಗೂ ಯಕ್ಷಗಾನ ವೇಷಗಳು ಎಲ್ಲರ ಗಮನಸೆಳೆಯಿತು.



ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಪ್ರವೀಣ್ ಕುಮಾರ್, ಅಜಿತ್ ಜೈನ್, ನಯನ ವರ್ಮ,ಅಣ್ಣಿ ಪೂಜಾರಿ, ನಿರಂಜನ್ ಜೈನ್,ಟಿ.ಕೆ.ವೆಂಕಟರಾವ್, ಮಂಜುನಾಥ ಶೆಟ್ಟಿ, ಸುಕೇಶ್ ಶೆಟ್ಟಿ ಎದಮಾರು, ಹರಿಶ್ಚಂದ್ರ ಕೆಸಿ, ಲಕ್ಷ್ನಣ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್ ಹನ್ನೇರು, ಸತೀಶ್ ವಿ.ಶೆಟ್ಟಿ, ಪದ್ಮನಾಭ ಕೋಟ್ಯಾನ್, ಲತಾ ಹೆಗ್ಡೆ, ಅಕ್ಷಯ ಕುಮಾರ್, ಗಣೇಶ್ ಬಿ.ಅಳಿಯೂರು, ಅಭಿಲಾಷ್ ಅರ್ಜುನಾಪುರ,ಪ್ರವೀಣ್ ಕುಮಾರ್ ಅರ್ಜುನಾಪುರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










