ಬೆದ್ರ ಕಂಬುಲ: ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಕೋಟ್ಯಾನ್

Picture of Namma Bedra

Namma Bedra

Bureau Report

ಇಪ್ಪತ್ತ ಮೂರನೇ ವರ್ಷದ ಬೆದ್ರ ಕಂಬುಲದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕಂಬಳ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆಗಿರುವ ಉಮಾನಾಥ ಕೋಟ್ಯಾನ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕೋಟಿ ಚೆನ್ನಯ ಜೋಡುಕರೆ ಕಂಬಳವು ಅತ್ಯಂತ ಯಶಸ್ವಿಯಾಗಿ, ಅಚ್ಚುಕಟ್ಟಾಗಿ, ಅದ್ದೂರಿಯಾಗಿ ನಡೆದು ಮುಕ್ತಾಯಗೊಂಡಿದ್ದು ಈ ಯಶಸ್ಸಿಗೆ ಸಹಕರಿಸಿದ ಕಂಬಳ ಸಮಿತಿಯ ಪದಾಧಿಕಾರಿಗಳಿಗೆ, ಸದಸ್ಯರಿಗೆ,ಕಂಬಳ ಕೋಣಗಳ ಯಜಮಾನರಿಗೆ,ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಬಿಜೆಪಿ ಯುವಮೋರ್ಚಾ, ಎಬಿವಿಪಿ, ಪಳಕಳ ಮಿತ್ರ ಮಂಡಳಿ,ಯುವ ಉತ್ಸಾಹಿ ಬಳಗ ಕೇಮಾರು, ಊಟೋಪಚಾರ ವ್ಯವಸ್ಥೆಯನ್ನು ಶ್ರದ್ಧೆಯಿಂದ ನಿರ್ವಹಿಸಿದವರಿಗೆ, ಎರಡೂ ದಿನಗಳಲ್ಲಿ ಸುರಕ್ಷಿತ ಆಯೋಜನೆಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ,ಪುರಸಭೆ,ಆರೋಗ್ಯ ಇಲಾಖಾಧಿಕಾರಿಗಳಿಗೆ, ಮಾಧ್ಯಮ ಮಿತ್ರರಿಗೆ ಹಾಗೂ ಭಾಗವಹಿಸಿ ಶುಭಹಾರೈಸಿದ ಸರ್ವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top