ಹೊಸ್ಮಾರು ಸಮೀಪದ ಈದು ನೂರಾಳಬೆಟ್ಟು ಎಂಬಲ್ಲಿ ಪತ್ನಿಯನ್ನು ಕೊಂದಿದ್ದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದಾರೆ.
ಈದು ಗುಮ್ಮೆತ್ತು ನಿವಾಸಿ ಸುನಿಲ್ ಈ ಪ್ರಕರಣದ ಆರೋಪಿಯಾಗಿದ್ದು ಆತನ ಪತ್ನಿ ಗೀತಾ ಅವರು ಕೊಲೆಯಾದವರು.
ಸುನಿಲ್ ಟ್ರಾವೆಲ್ ಏಜೆನ್ಸಿ ಉದ್ಯೋಗ ಮಾಡಿಕೊಂಡಿದ್ದರೆ ಗೀತಾ ಅವರು ಮನೆ ಸಮೀಪ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರು.
ಸುನಿಲ್ ಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದು ಇದೇ ವಿಷಯದಲ್ಲಿ ಪತಿ ಪತ್ನಿ ಜತೆ ಜಗಳವಾಗುತ್ತಿತ್ತೆನ್ನಲಾಗಿದೆ.
ಕೆಲ ದಿನಗಳ ಹಿಂದೆ ಜಗಳ ನಡೆದು ಕೋಪಗೊಂಡಿದ್ದ ಸುನಿಲ್ ಗೀತಾ ಅವರ ಹಣೆ,ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದ.
ಗಂಭೀರ ಗಾಯಗೊಂಡಿದ್ದ ಗೀತಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.
ಆರೋಪಿ ಸುನಿಲ್ ನನ್ನು ವಶಕ್ಕೆ ಪಡೆದ ಕಾರ್ಕಳ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.





