ಪ್ರತೀಕ್ಷಾ ಫ್ಯಾನ್ಸಿ ಮಾಲಕಿ, ಸಾಹಿತಿ ಉಷಾ ಆರ್. ರಾವ್ ನಿಧನ

Picture of Namma Bedra

Namma Bedra

Bureau Report

ಮೂಡುಬಿದಿರೆ, ಫೆ.5: ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್ ಅನ್ನು ಕಳೆದ 3 ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ (56) ಫೆ.3ರಂದು ನಿಧನ ಹೊಂದಿದರು.
ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ
‘ಶರಧಿ‘ ಕಾವ್ಯ ನಾಮದೊಂದಿಗೆ, ‘ಶರದಿ ಕಾದಿದೆ‘ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಉಷಾ ರಾವ್ ಅವರು ಕಾಗದದ ದೋಣಿ, ಅವಧಿ ನೀ ನಾದ ನಾ ನಿನಾದ , ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಮೊದಲಾದ ಕೃತಿಗಳನ್ನು ಅವರು ರಚಿಸಿ ಪ್ರಕಟಿಸಿದ್ದು ಪ್ರತಿದಿನ ಬರೆದಿಟ್ಟ ಪುಟಗಳನ್ನು ಆನ್ ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದವರು. ಅವರ ಪುಸ್ತಕಗಳನ್ನು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲ ಬಂಗಾಲದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗ ಖರೀದಿಸಿರುವುದು ವಿಶೇಷ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸಹಿತ ಹೆಸರಾಂತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ.ಸಾಹಿತಿ, ಅಂಕಣಕಾರ ಸಂತೋಷ್ ಕುಮಾರ ಮೆಹೆಂದಳೆ ಸಹಿತ ಅನೇಕ ಗಣ್ಯರು ಇವರ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top