ಮೂಡುಬಿದಿರೆ: ಶೋರಿನ್ ರಿಯೂ ಕರಾಟೆ ನೂತನ ತರಬೇತಿ ಕೇಂದ್ರ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ: ಹೆಸರಾಂತ ಕರಾಟೆ ತರಬೇತಿ ಸಂಸ್ಥೆ ಶೋರಿನ್ ರಿಯೂ ಕರಾಟೆ ನೂತನ ತರಬೇತಿ ಕೇಂದ್ರವನ್ನು ರತನ್ ಗ್ಯಾರೆಜ್ ಬಳಿಯಿರುವ ಸಿಟಿ ಲೈಟ್ ಆರ್ಕೇಡ್ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು.
ಮೈ ಚಾಯ್ಸ್ ಮೆನ್ಸ್ ಪಾರ್ಲರ್ ಗ್ರೂಪ್‌ನ ಮಾಲೀಕ ಕೆ. ಎನ್. ಪ್ರಕಾಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕರಾಟೆ ಶಿಕ್ಷಣವು ಶಿಸ್ತು, ಆತ್ಮವಿಶ್ವಾಸ ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ನಮ್ಮ ಬೆದ್ರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ ಮಾತನಾಡಿ, ನದೀಂ ಹಾಗೂ ಸರ್ಫರಾಜ್ ಅವರು ಮೂಡುಬಿದಿರೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ರಾಷ್ಟ್ರ, ರಾಜ್ಯಮಟ್ಟದಲ್ಲಿ ಅವರ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಪತ್ರಕರ್ತ ಯಶೋದರ ಬಂಗೇರ, ಕಾರ್ಮಿಕ ಮುಖಂಡ ಯಾದವ ಶೆಟ್ಟಿ, ವಿದ್ಯಾಗಿರಿಯ ಭಾರತ್ ಚಿಕನ್ ಸೆಂಟರ್‌ನ ಎಂ. ಎಸ್. ಜೈನುದ್ದೀನ್, ರಾಜ್ಯ ಕರಾಟೆ ಶಿಕ್ಷಕರ ಸಂಘ ಅಧ್ಯಕ್ಷ ಮೊಹಮ್ಮದ್ ನದೀಮ್, ದಕ್ಷಿಣ ಕನ್ನಡ ಜಿಲ್ಲೆ ಕರಾಟೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್ ನಿಟ್ಟೆ , ಸಂಸ್ಥೆಯ ಮಾರ್ಗದರ್ಶಕರಾದ ಅಬೂಬಕ್ಕರ್ ಪುತ್ತಿಗೆ, ಅಬೂಬಕ್ಕರ್‌ ಹಂಡೇಲು, ಹಫೀಝ್ ಬೆದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕ ಸಫ್ರಾಜ್ ಅಬ್ದುಲ್ ಖಾದ್ರಿ ಅವರು ಅತಿಥಿಗಳನ್ನು ಗೌರವಿಸಿ, ಕರಾಟೆ ತರಬೇತಿ ಕೇಂದ್ರದ ಉದ್ದೇಶಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ರಫೀಜ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top